ಆಂಧ್ರಪ್ರದೇಶ: ಗ್ರಾಮೀಣ ಮನೆಗಳಲ್ಲಿ ಸದ್ಯದಲ್ಲೇ ಎಲ್.ಇ.ಡಿ ಬೆಳಕು, 10 ರೂ.ಗೆ ಬಲ್ಬ್‌ ವಿತರಣೆ

Ad Code

ಆಂಧ್ರಪ್ರದೇಶ: ಗ್ರಾಮೀಣ ಮನೆಗಳಲ್ಲಿ ಸದ್ಯದಲ್ಲೇ ಎಲ್.ಇ.ಡಿ ಬೆಳಕು, 10 ರೂ.ಗೆ ಬಲ್ಬ್‌ ವಿತರಣೆ



ಹೈದರಾಬಾದ್: ದೇಶ ಇಷ್ಟೊಂದು ಮುಂದುವರೆದಿದ್ದರೂ, ತಂತ್ರಜ್ಞಾನ ಕ್ಷೇತ್ರ ಅದೆಷ್ಟೇ ಪ್ರಗತಿಯಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಕೆಲವೊಂದು ಕಡೆ ಮೂಲಭೂತ ಸೌಕರ್ಯಕ್ಕೂ ಪರದಾಡುವಂತ ಪರಿಸ್ಥಿತಿ ಇದೆ. ಇದಕ್ಕೆ ವಿದ್ಯುತ್ ಪೂರೈಕೆ ಏನೂ ಹೊರತಾಗಿಲ್ಲ.

ಹೌದು ಕೆಲವು ಗ್ರಾಮೀಣ ಭಾಗದಲ್ಲಿ ಜನರು ಮನೆಯಲ್ಲಿ ವಿದ್ಯುತ್ ಸೌಲಭ್ಯ ಇಲ್ಲದೆಯೇ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವು ಕಡೆ ಅದು ಇದ್ದರೂ ಪವರ್ ಕಟ್ ನಂಥ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಆಂಧ್ರಪ್ರದೇಶ ಸರ್ಕಾರವು ಡಿಸೆಂಬರ್ 14ರಿಂದ ಫೆಬ್ರವರಿ 15, 2022ರವರೆಗೆ ಗ್ರಾಮ ಉಜಾಲ ಕಾರ್ಯಕ್ರಮದಡಿಯಲ್ಲಿ ಪ್ರತೀ ಬಲ್ಬ್ ಗೆ ಹತ್ತು ರೂಪಾಯಿಯಂತೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಗ್ರಾಮೀಣ ಪ್ರದೇಶದ ಮನೆಗಳಿಗೆ 10 ಲಕ್ಷ ಎಲ್.ಇ.ಡಿ ಬಲ್ಬ್ ಗಳನ್ನು ವಿತರಿಸಲು ಯೋಜಿಸುತ್ತಿದೆ.

ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ ನ ಅಂಗ ಸಂಸ್ಥೆಯಾದ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ನ ಬೆಂಬಲದೊಂದಿಗೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ.

Post a Comment

0 Comments