ಕಾನ್ಪುರ ಮೆಟ್ರೋ ಉದ್ಘಾಟನೆ: ಪ್ರಧಾನಿ ಮೋದಿ ಭೇಟಿ

Ad Code

ಕಾನ್ಪುರ ಮೆಟ್ರೋ ಉದ್ಘಾಟನೆ: ಪ್ರಧಾನಿ ಮೋದಿ ಭೇಟಿ

ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮೆಟ್ರೋ ರೈಲು ಯೋಜನೆಯ ಸಂಪೂರ್ಣಗೊಂಡ ಮೊದಲ ಹಂತವನ್ನು ಉದ್ಘಾಟನೆ ಮಾಡಲಿದ್ದಾರೆ. 

ಇಂದು ಐಐಟಿ ಮೆಟ್ರೋ ಸ್ಟೇಶನ್ ನಿಂದ ಗೀತಾ ನಗರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ ಪರಿಶೀಲನೆ ನಡೆಸಲಿದ್ದಾರೆ. ನಗರಾಭಿವೃದ್ಧಿ ಹಾಗೂ ನಗರದ ಸಂಚಾರ ಮಾರ್ಗ ಸುಧಾರಣೆ ಪ್ರಧಾನಿ ಮೋದಿಯವರ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆ ಇನ್ನೊಂದು ಪ್ರಮುಖ ಸುಧಾರಣೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಕಾನ್ಪುರಕ್ಕೆ ಭೇಟಿ ನೀಡುವ ಬಗ್ಗೆ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಈ ಮೆಟ್ರೋ ರೈಲು ಯೋಜನೆಯ ಉದ್ದ 32 ಕಿ.ಮೀ ಆಗಿದ್ದು ಒಟ್ಟಾರೆ ವೆಚ್ಚ 11 ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ಹೇಳಿದ್ದಾರೆ. 

Post a Comment

0 Comments