25 ವರ್ಷಗಳ ನಂತರ ಭಾರತದಲ್ಲಿ ಕಾಣಿಸಿಕೊಂಡ ಅತಿ ಅಪರೂಪದ ಪಕ್ಷಿ 'ಮೌಂಟ್ ವಿಕ್ಟೋರಿಯಾ ಬಾಬಾಕ್ಸ್'

Ad Code

25 ವರ್ಷಗಳ ನಂತರ ಭಾರತದಲ್ಲಿ ಕಾಣಿಸಿಕೊಂಡ ಅತಿ ಅಪರೂಪದ ಪಕ್ಷಿ 'ಮೌಂಟ್ ವಿಕ್ಟೋರಿಯಾ ಬಾಬಾಕ್ಸ್'

 



ಮೌಂಟ್ ವಿಕ್ಟೋರಿಯಾ ಬಾಬಾಕ್ಸ್ ಪಕ್ಷಿ 25 ವರ್ಷಗಳ ಸುದೀರ್ಘ ಅಂತರದ ನಂತರ ಭಾರತದ ಮಿಜೋರಾಂನಲ್ಲಿ ಕಾಣಿಸಿಕೊಂಡಿದೆ. 1997 ರಿಂದ ಭಾರತದಲ್ಲಿ ಈ ಜಾತಿಯ ಪಕ್ಷಿಗಳು ಕಂಡುಬಂದಿಲ್ಲ.


ಮಿಜೋರಾಂನ ಫಾಂಗ್‌ಪುಯಿ (ಬ್ಲೂ ಮೌಂಟೇನ್) ರಾಷ್ಟ್ರೀಯ ಉದ್ಯಾನ ವನದಲ್ಲಿ ಇಬ್ಬರು ಪಕ್ಷಿಪ್ರೇಮಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.


ಮೌಂಟ್ ವಿಕ್ಟೋರಿಯಾ ಬಾಬಾಕ್ಸ್ ಲಾಫಿಂಗ್ ಥ್ರಷ್ ಕುಟುಂಬ ಲಿಯೊಥ್ರಿಚಿಡೆಗೆ ಸೇರಿದೆ ಮತ್ತು ಇದು ಹೆಚ್ಚಾಗಿ ತೆರೆದ ಕಾಡುಗಳು, ಅರಣ್ಯದ ಅಂಚುಗಳಲ್ಲಿ ಮತ್ತು 1200-2800 ಮೀಟರ್ ಎತ್ತರದಲ್ಲಿ  ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದನ್ನು ಮಿಜೋರಾಂ ಮತ್ತು ಮ್ಯಾನ್ಮಾರ್‌ನ ಚಿನ್ ರಾಜ್ಯದಲ್ಲಿ ಸೀಮಿತ ಭೌಗೋಳಿಕ ವ್ಯಾಪ್ತಿಯಲ್ಲಿ ಕಾಣಬಹುದು.

ಮೌಂಟ್ ವಿಕ್ಟೋರಿಯಾ ಬಾಬಾಕ್ಸ್

2005 ರವರೆಗೆ, ಇದನ್ನು ಚೀನೀ ಬಾಬಾಕ್ಸ್‌ನ ಉಪಜಾತಿ ಎಂದು ಪರಿಗಣಿಸಲಾಗಿತ್ತು, ಇದು ಅದನ್ನು ನಿಕಟವಾಗಿ ಹೋಲುತ್ತದೆ, ಆದರೆ ಅದರ ಪುಕ್ಕಗಳು ಮತ್ತು ಕೂಜನದ ಧ್ವನಿಯ ಆಧಾರದ ಮೇಲೆ ವಿಭಿನ್ನವೆಂದು ಪರಿಗಣಿಸಲಾಗಿದೆ. ಮೌಂಟ್ ವಿಕ್ಟೋರಿಯಾ ಬಾಬಾಕ್ಸ್ ಸ್ವಲ್ಪ ಕೆಳಗೆ ಬಾಗಿದ ಕಪ್ಪಗಿನ ಕೊಕ್ಕು  ಮತ್ತು ದಪ್ಪನೆಯ ಕಪ್ಪು ಮೀಸೆಯನ್ನು ಹೊಂದಿದೆ.


ಮಿಜೋರಾಂನ ಲಾಂಗ್‌ಟ್ಲಾಯ್‌ನಲ್ಲಿರುವ  ಫಾಂಗ್‌ಪುಯಿ ರಾಷ್ಟ್ರೀಯ ಉದ್ಯಾನವನವು ಪರ್ವತ ಮೇಕೆ, ಫಾಲ್ಕನ್, ಸನ್‌ಬರ್ಡ್ಸ್, ಮಿಸೆಸ್ ಹ್ಯೂಮ್ಸ್ ಫೆಸೆಂಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಇತರ ಪಕ್ಷಿಗಳು ಮತ್ತು ಪ್ರಾಣಿ ಪ್ರಭೇದಗಳ ಆವಾಸ ಸ್ಥಾನವಾಗಿದೆ.


ಇದಕ್ಕೇಕೆ ಇಷ್ಟು ಮಹತ್ವ?

ಭಾರತದಲ್ಲಿ ಇದು ಕೇವಲ ಮಿಜೋರಾಂನಲ್ಲಿ ಮಾತ್ರ ಬಹಳ ಸೀಮಿತ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದರಿಂದ ಪಕ್ಷಿಗಳ ವೀಕ್ಷಕರಿಗೆ ಮಹತ್ವದ್ದಾಗಿದೆ.  ಭಾರತದಲ್ಲಿ ಕಂಡು ಬಂದಿರುವ ಈ ಜಾತಿಯ ಪಕ್ಷಿಗಳ ಮೊದಲ ಛಾಯಾಚಿತ್ರ ದಾಖಲೆ ಇದಾಗಿದೆ. ಇದಲ್ಲದೆ, ಪಕ್ಷಿ ಪ್ರಭೇದಗಳು ಈ ಪ್ರದೇಶದಲ್ಲಿ ನಿರಂತರವಾಗಿ ಕಾಣಸಿಗುತ್ತದೆ.  ಈ ಪ್ರದೇಶದಲ್ಲಿ ಈ ಪಕ್ಷಿಗೆ ಸಂರಕ್ಷಣೆ ದೊರೆಯುತ್ತಿರುವುದನ್ನು ಸಾಬೀತುಪಡಿಸಿದೆ.  ಈ ಪ್ರದೇಶವನ್ನು ಸಂರಕ್ಷಿಸುವುದರಿಂದ ದೇಶದಲ್ಲಿ ಪಕ್ಷಿಗಳ ಸಂತತಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ.


ಮಿಜೋರಾಂ ಅನ್ನು ವನ್ಯಜೀವಿಗಳಿಗೆ ಸ್ವರ್ಗ ಎಂದು ಕರೆಯಲಾಗುತ್ತದೆ. ಇದು ವಿವಿಧ ರೀತಿಯ ಪ್ರೈಮೇಟ್‌ಗಳಿಗೆ ನೆಲೆಯಾಗಿದೆ. ಅಪರೂಪದ ಆರ್ಕಿಡ್ ಪ್ರಭೇದಗಳು, ಬಿದಿರುಗಳು ಇಲ್ಲಿ ಕಾಣಸಿಗುತ್ತವೆ. ರಾಜ್ಯವು ಹೂವಿನ ವೈವಿಧ್ಯತೆಯಲ್ಲಿ ಸಮೃದ್ಧವಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments