ಚೀನಾದ ಹೊಸ ಕಣ್ಗಾವಲು ವ್ಯವಸ್ಥೆಗೆ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಟಾರ್ಗೆಟ್....

Ad Code

ಚೀನಾದ ಹೊಸ ಕಣ್ಗಾವಲು ವ್ಯವಸ್ಥೆಗೆ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಟಾರ್ಗೆಟ್....


ಬೀಜಿಂಗ್‌: ಚೀನಾದ ಅತಿದೊಡ್ಡ ಪ್ರಾಂತ್ಯಗಳಲ್ಲಿ ಒಂದರಲ್ಲಿ ಭದ್ರತಾ ಅಧಿಕಾರಿಗಳು ಪತ್ರಕರ್ತರು ಮತ್ತು ಅಂತರಾಷ್ಟ್ರೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಪತ್ತೆಹಚ್ಚುವ ಕಣ್ಗಾವಲು ವ್ಯವಸ್ಥೆಯನ್ನು ರೂಪಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಲಕ್ಷಾಂತರ ಕ್ಯಾಮೆರಾಗಳು ಮತ್ತು ಸ್ಮಾರ್ಟ್ ಫೋನ್ ಮಾನಿಟರಿಂಗ್ ಮತ್ತು ಮುಖ ಗುರುತಿಸುವಂತಹ ತಂತ್ರಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನ ನೆಟ್ವರ್ಕ್ ಒಂದನ್ನು ಚೀನಾ ಪ್ರಯತ್ನಿಸುತ್ತಿದೆ. ತಮ್ಮ ಅನೇಕ  ಕಾರ್ಯಾಚರಣೆಗಳ ಬಗ್ಗೆ ರಹಸ್ಯ ಕಾಯ್ದುಕೊಳ್ಳಲು ಸಂಶಯಾಸ್ಪದ ವ್ಯಕ್ತಿಗಳ ನಡುವೆ ಮಾಧ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಗುರುತಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.

Post a Comment

0 Comments