ಅಯೋಧ್ಯೆ ತೀರ್ಪು ನನ್ನದಲ್ಲ, ಸುಪ್ರೀಂ ಕೋರ್ಟಿನದ್ದು: ಮಾಜಿ CJI ರಂಜನ್ ಗೊಗೋಯ್

Ad Code

ಅಯೋಧ್ಯೆ ತೀರ್ಪು ನನ್ನದಲ್ಲ, ಸುಪ್ರೀಂ ಕೋರ್ಟಿನದ್ದು: ಮಾಜಿ CJI ರಂಜನ್ ಗೊಗೋಯ್


ವಾರಣಾಸಿ: ನ್ಯಾಯಾಂಗ ವ್ಯವಸ್ಥೆ ಎನ್ನುವಂತದ್ದು ಸಂವಿಧಾನದ ಆದೇಶದಂತೆ ನಡೆಯಬೇಕೇ ಹೊರತು ಧರ್ಮದ ಆಧಾರದ ಮೇಲಲ್ಲ. ಸಂವಿಧಾನದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಸಂಸದ ರಂಜನ್ ಗೊಗೋಯ್ ಹೇಳಿದ್ದಾರೆ.

ವಾರಣಾಸಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು "ನ್ಯಾಯಾಧೀಶನೊಬ್ಬನ ಭಾಷೆ ಹಾಗೂ ಧರ್ಮ ಎರಡೂ ಕೂಡ ಸಂವಿಧಾನವಾಗಿದೆ. ರಾಮಜನ್ಮಭೂಮಿಯ ತೀರ್ಪು ಕೂಡ ನನ್ನದಲ್ಲ. ಯಾವುದೇ ತೀರ್ಪಿಗೆ ಜಾತಿ, ಧರ್ಮ ಮಾನದಂಡವೇ ಅಲ್ಲ. ಸಂವಿಧಾನವೇ ಎಲ್ಲಕ್ಕಿಂತ ಮಿಗಿಲು" ಎಂದು ಹೇಳಿದ್ದಾರೆ. 

ಸುಪ್ರೀಂಕೋರ್ಟಿನ ಆದೇಶದಂತೆ ಎಲ್ಲವೂ ಕಾಲಕ್ಕನುಗುಣವಾಗಿ ನಡೆಯಲಿದೆ ಎಂದು ಅವರು ಕಾರ್ಯಕ್ರಮವನ್ನುದ್ದೇಶಿಸಿ ಹೇಳಿದ್ದಾರೆ.


Post a Comment

0 Comments