ಇಸ್ಲಾಮಾಬಾದ್: ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಜಾಯ್ ತಾವು ವಿವಾಹವಾಗುವ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಮಲಾಲಾ, ಈ ದಿನ ನನ್ನ ಜೀವನದ ಅತ್ಯಮೂಲ್ಯ ದಿನವಾಗಿದೆ. ನಾನು ಹಾಗೂ ಅಸರ್ ಜೀವನ ಸಂಗಾತಿಗಳಾಗಿದ್ದೇವೆ. ಕುಟುಂಬಸ್ಥರ ಜೊತೆ ಬರ್ಮಿಂಗ್ಹ್ಯಾಮ್ನ ನಿವಾಸದಲ್ಲಿ ಸಣ್ಣ ನಿಖಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಿಮ್ಮೆಲ್ಲರ ಹಾರೈಕೆ ನಮಗಿರಲಿ. ಮುಂದಿನ ಜೀವನವನ್ನು ನಡೆಸಲು ನಾವು ಉತ್ಸುಕರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಈ ಶೀರ್ಷಿಕೆಯ ಜೊತೆಯಲ್ಲಿ ವಿವಾಹ ಫೋಟೋಗಳನ್ನು ಮಲಾಲಾ ಹಂಚಿಕೊಂಡಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments