ಅಧಿವೇಶನದಲ್ಲಿ ಎಲ್ಲಾ ವಿಷಯದ ಚರ್ಚೆಗೆ ಸರ್ಕಾರ ಸಿದ್ದ : ಪ್ರಧಾನಿ ಮೋದಿ

Ad Code

ಅಧಿವೇಶನದಲ್ಲಿ ಎಲ್ಲಾ ವಿಷಯದ ಚರ್ಚೆಗೆ ಸರ್ಕಾರ ಸಿದ್ದ : ಪ್ರಧಾನಿ ಮೋದಿ



ನವದೆಹಲಿ: ಸಂಸತ್ತಿನ ಅಧಿವೇಶನಕ್ಕೂ ಮುನ್ನ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸರ್ಕಾರ ಯಾವುದೇ ಪ್ರಶ್ನೆ ಗಳಿಗೂ ಉತ್ತರಿಸಲು ಸಿದ್ಧವಿದೆ. ಸದನದಲ್ಲಿ ಯಾವುದೇ ಬಗೆಯ ಚರ್ಚೆಗೆ  ಅವಕಾಶ ನೀಡಲಾಗುತ್ತದೆ. ಆದರೆ ಎಲ್ಲಾ ಪಕ್ಷಗಳು ಸಂಸತ್ತಿನ ಘನತೆ ಮತ್ತು ಸಭಾಪತಿಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು. 

"ಪ್ರತಿಯೊಂದು ವಿಷಯವನ್ನು ಮುಕ್ತ ಮನಸ್ಸಿನಿಂದ ಅವಲೋಕಿಸಲು ಪ್ರತಿಯೊಬ್ಬರಿಗು ಅವಕಾಶವಿದೆ. ಸರ್ಕಾರದ ಮೇಲೆ ಪ್ರಶ್ನೆಗಳು ಇರಬೇಕೆಂದು ನಾವು ಕೂಡ ಬಯಸುತ್ತೇವೆ. ಸರ್ಕಾರ ಮತ್ತು ಅದರ ನೀತಿಯ ಬಗ್ಗೆ ಧ್ವನಿ ಎತ್ತಬಹುದು. ಪ್ರಜೆಗಳ ಅಗತ್ಯಕ್ಕೆ ಅನುಗುಣವಾಗಿ ಆದೇಶವನ್ನು ಪಾಲಿಸಲಾಗುತ್ತದೆ. " ಎಂದು ಹೇಳಿದರು.

ಇನ್ನು ಕೋವಿಡ್ 19ರ ಹೊಸ ರೂಪಾಂತರ (ಒಮಿಕ್ರೋನ್ ಗೆ) ಸಂಬಂಧಿಸಿದಂತೆ ಅವರು ಜನರಿಗೆ ಎಚ್ಚರಿಕೆಯ ಸಲಹೆ ನೀಡಿದರು. ಕೊರೋನಾದ ವಿರುದ್ಧ 100 ಮಿಲಿಯನ್ ವ್ಯಾಕ್ಸಿನೇಷನ್ ದಾಟಿದ ಮೇಲೆ ದೇಶ 150 ಕೋಟಿ ಗುರಿಯತ್ತ ಸಾಗುತ್ತಿದೆ " ಎಂದು ಹೇಳಿದರು.

Post a Comment

0 Comments