ನವದೆಹಲಿ: ಮನ್ ಕಿ ಬಾತ್ ಮಾಸಿಕ ರೇಡಿಯೋ ಕಾರ್ಯಕ್ರಮದ 83ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಇಂದು ಮಾತನಾಡಿದ್ದಾರೆ. ಹುತಾತ್ಮ ವೀರ ಯೋಧರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು, ಗೌರವ ಸಮರ್ಪಿಸಿದ್ದಾರೆ.
ಡಿಸೆಂಬರ್ ತಿಂಗಳು ಇನ್ನೆರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ರಾಷ್ಟ್ರವು ನೌಕಾಪಡೆಯ ದಿನ ಹಾಗೂ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡುತ್ತದೆ. ಡಿಸೆಂಬರ್ 16 ರಂದು ನಮ್ಮ ದೇಶವು 1971 ರ ಯುದ್ಧದ ಸುವರ್ಣ ಮಹೋತ್ಸವವನ್ನು ಆಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಎಲ್ಲಾ ಸಂದರ್ಭಗಳಲ್ಲೂ, ನಾನು ದೇಶದ ಭದ್ರತಾ ಪಡೆಗಳನ್ನು ಸ್ಮರಿಸಿಕೊಳ್ಳುತ್ತೇನೆ, ನಮ್ಮ ವೀರ ಯೋಧರನ್ನು ನೆನಪಿಸಿಕೊಳ್ಳುತ್ತೇನೆಂದು ಹೇಳಿದರು.
ನಂತರ ಅಮೃತ ಮಹೋತ್ಸವದ ಬಗ್ಗೆ ಮಾತನಾಡಿ, ಅಮೃತ ಮಹೋತ್ಸವವು ಕಲಿಯುವುದರೊಂದಿಗೆ ದೇಶಕ್ಕಾಗಿ ಏನನ್ನಾದರೂ ಮಾಡುವುದನ್ನು ಕೂಡಾ ಪ್ರೇರೇಪಿಸುತ್ತದೆ. ಒನ್ಜಿಸಿಯಿಂದ ತನ್ನ ವಿದ್ಯಾರ್ಥಿಗಳಿಗೆ ಸ್ಟಡಿ ಟೂರ್ ಏರ್ಪಡಿಸಿ, ಈ ಮೂಲಕ ಒನ್ಜಿಸಿ ಕೂಡ ಅತ್ಯುತ್ತಮ ರೀತಿಯಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನುಡಿದರು.
ಪ್ರಧಾನಿ ಮೋದಿಯವರು 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'ಗೆ ಉದಾಹರಣೆ ನೀಡಿದರು. ಜಲೌನ್‌ನಲ್ಲಿ ನೂನ್ ನದಿ ವಿನಾಶದ ಅಂಚಿಗೆ ಬಂದಿತ್ತು. ಇದರಿಂದಾಗಿ ಈ ಪ್ರದೇಶದ ಜನರು ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಜಲೌನ್‌ನ ಜನರು ಈ ವರ್ಷ ಸಮಿತಿಯೊಂದನ್ನು ರಚಿಸಿದರು ಹಾಗೂ ನದಿಯನ್ನು ಪುನಶ್ಚೇತನ ಮಾಡಿದರು. ಇದು 'ಸಬ್ಕಾ ಸಾಥ್, ಸಬ್ಕಾ ವಿಕಾಸ್'ಗೆ ಸಮರ್ಥ ನಿದರ್ಶನ ಎಂದು ಹೇಳಿದರು. ಆಯುಷ್ಮಾನ್ ಯೋಜನೆಯ ಪ್ರಯೋಜನಗಳನ್ನು ಜನರಿಗೆ ತಲುಪುವಂತೆ ಮಾಹಿತಿ ನೀಡಿದರು.
ಸ್ಟಾರ್ಟ್‌ಅಪ್ ಬಗ್ಗೆ ಮೋದಿಯವರು ಮಾತನಾಡಿ, ಇಂದು ದೇಶದಲ್ಲಿ 70ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು 1 ಶತಕೋಟಿಗಿಂತಲೂ ಹೆಚ್ಚಿನ ಮೌಲ್ಯವನ್ನು ದಾಟಿ ಮುನ್ನುಗ್ಗುತ್ತಿವೆ. ತಮ್ಮ ಸ್ಟಾರ್ಟಪ್‌ಗಳ ಮುಖಾಂತರ ಹಲವಾರು ಭಾರತೀಯರು ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments