ಕೊರೋನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಇಡೀ ಜಗತ್ತಿನಲ್ಲಿ ಗೊಂದಲವನ್ನೇ ಸೃಷ್ಠಿಸಿದೆ. ಭಾರತದಲ್ಲಿ ಈವರೆಗೆ ಯಾವುದೇ ಈ ಹೊಸ ತಳಿ ಪತ್ತೆಯಾಗಿಲ್ಲ. ಆದರೂ ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲು ಸಜ್ಜಾಗಿದೆ. ಕೊರೋನಾ ನಿರ್ವಹಣೆ, ಓಮಿಕ್ರಾನ್ ಕುರಿತು ನಾಳೆ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. "ಕೋವಿಡ್ ನಿಯಂತ್ರಣದಲ್ಲಿದೆ. ದೇಶದೆಲ್ಲೆಡೆ ವ್ಯಾಕ್ಸಿನ್ ಕೂಡ ನೀಡಲಾಗುತ್ತಿದೆ. ಆದರೂ ಇದರ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ನಾವು ಇದರ ದುಷ್ಪರಿಣಾಮವನ್ನು ಎದುರಿಸುವ ಸಂಭವ ಎದುರಾದೀತು " ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಸ್ಪಷ್ಟವಾಗಿ ಹೇಳಿದ್ದಾರೆ.
1 Comments
Vaccination in total is good...and immunity boosters protecting lungs, heart and kidney is important.we can only find good ayurveda drugs for protection of vital organs which may take two to three months of regular dosages. To fight against acute infections allopathy is essential.Homeopathy works well as vaccination and Sera therapy if proper steps adopted.Governament may look into it in these aspects with broader sense with suitable authorities
ReplyDelete