ಕಾನ್ಪುರ: ಸದ್ಯ ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರನಾಗಿರುವ ಅಶ್ವಿನ್ ಇತ್ತೀಚಿಗೆ ಹೊಸ ದಾಖಲೆಯೊಂದನ್ನು ಸೃಷ್ಟಡಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಶ್ವಿನ್ ಭಾರತ ತಂಡದ ಪರ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡ ಹರ್ಭಜನ್ ಸಿಂಗ್ ಅವರಿಗೂ ಸವಾಲೆಸಿದಿದ್ದಾರೆ. "2019ರಲ್ಲಿ ಕೊರೋನಾ ಹಾವಳಿ ವ್ಯಾಪಕವಾಗಿ ಕಾಡಿದಾಗ ಕ್ರಿಕೆಟ್ ಬದುಕು ಅಂತ್ಯವಾಯಿತೋ ಏನೋ ಅಂದುಕೊಂಡೆ "ಎಂದು ಬಿಸಿಸಿಐ ಟಿವಿ ಸಲುವಾಗಿ ಶ್ರೇಯಸ್ ಅಯ್ಯರ್ ನಡೆಸಿಕೊಟ್ಟ ಸಂದರ್ಶನದಲ್ಲಿ ಅಶ್ವಿನ್ ಹೇಳಿದ್ದಾರೆ. " ನಿಜ ಹೇಳಬೇಕೆಂದರೆ ಕೊರೋನಾದಿಂದಾಗಿ ಬದುಕು ಅತ್ಯಂತ ಕಠಿಣ ಎನಿಸಿತ್ತು. ಮತ್ತೆ ಆಡಬಹುದೆಂಬ ನಿರೀಕ್ಷೆಯೂ ಇರಲಿಲ್ಲ. ಐಪಿಎಲ್ ನಿಂದ ಕೂಡ ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ, ಹರ್ಭಜನ್ ಸಿಂಗ್ ನನ್ನ ಸ್ಪೂರ್ತಿ " ಎಂದು ಹೇಳಿದ್ದಾರೆ.
0 Comments