ಶಬರಿಮಲೆಯ ಪ್ರಸಾದದಲ್ಲಿ ‘ಹಲಾಲ್ ಬೆಲ್ಲದ’ ಬಳಕೆ ತಡೆಯಲು ನ್ಯಾಯಾಲಯಕ್ಕೆ ಅರ್ಜಿ

Ad Code

ಶಬರಿಮಲೆಯ ಪ್ರಸಾದದಲ್ಲಿ ‘ಹಲಾಲ್ ಬೆಲ್ಲದ’ ಬಳಕೆ ತಡೆಯಲು ನ್ಯಾಯಾಲಯಕ್ಕೆ ಅರ್ಜಿ


ಕೊಚ್ಚಿ: ಕೇರಳದಲ್ಲಿನ ಶಬರಿಮಲೆ ದೇವಸ್ಥಾನದ ‘ಅರವಣ ಪಾಯಸ’ ಮತ್ತು ‘ಉನ್ನಿಯಪ್ಪಂ’ ಎಂಬ ಪ್ರಸಾದದ ತಯಾರಿಯಲ್ಲಿ ‘ಹಲಾಲ್ ಬೆಲ್ಲ’ವನ್ನು ಬಳಸಲಾಗುತ್ತಿದ್ದು, ಇದನ್ನು ತಡೆಯುವಂತೆ ಕೋರಿ ಎಸ್.ಜೆ.ಆರ್ ಕುಮಾರ್ ಅವರು ಕೇರಳದ ಉಚ್ಚನ್ಯಾಯಾಲದಲ್ಲಿ ಅರ್ಜಿ ದಾಖಲಿಸಿದ್ದಾರೆ.


ಈ ಬಗ್ಗೆ ನ್ಯಾಯಾಲಯವು ‘ತಿರುವಾಂಕೂರು ದೇವಸ್ಟಮ್ ಬೋರ್ಡ್’ ಗೆ ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ  ಆದೇಶ ನೀಡಿದೆ.


ಈ ಪ್ರಸಾದಗಳ ವಿತರಣೆಯನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದವನ್ನು ತಯಾರಿಸಲು ಈ ಬೆಲ್ಲವನ್ನು ಬಳಸಬಾರದು ಎಂಬ ಆದೇಶವನ್ನು ದೇವಸ್ವಮ್ ಬೋರ್ಡ್ ಮತ್ತು ಅನ್ನ ಸುರಕ್ಷಾ ಆಯುಕ್ತರಿಗೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments