ರೈಲುಗಳಲ್ಲಿ ಮತ್ತೆ ಆರಂಭಗೊಳ್ಳಲಿದೆ ಆಹಾರ ಸರಬರಾಜು

Ad Code

ರೈಲುಗಳಲ್ಲಿ ಮತ್ತೆ ಆರಂಭಗೊಳ್ಳಲಿದೆ ಆಹಾರ ಸರಬರಾಜು


ಹೊಸದಿಲ್ಲಿ: ಕೋವಿಡ್ 19 ವೈರಾಣು ಭೀತಿಯ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಆಹಾರ ವಿತರಣೆ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ವ್ಯವಸ್ಥೆಗೆ ಮರು ಚಾಲನೆಯನ್ನು ನೀಡಲು ರೈಲ್ವೇ ಇಲಾಖೆಯು ನಿರ್ಧಾರವನ್ನು ಮಾಡಿದೆ.


ಹೀಗಾಗಿ ರೈಲ್ವೇ ಮಂಡಳಿಯು ರೈಲುಗಳಲ್ಲಿ ಆಹಾರ ಪೂರೈಕೆ ಮಾಡುವ ಜವಾಬ್ದಾರಿಯನ್ನು ಹೊತ್ತಿರುವ ಭಾರತೀಯ ರೈಲ್ವೇ ಕೇಟರಿಂಗ್‌ ಹಾಗೂ ಟೂರಿಸಂ ಕಾರ್ಪೋರೇಷನ್‌ಗೆ (ಐಆರ್‌ಸಿಟಿಸಿ) ಪತ್ರವನ್ನು ಬರೆದಿದೆ.


ಈ ಹಿಂದೆಯಷ್ಟೇ ದೇಶೀಯ ವಿಮಾನ ಸೇವೆಗಳಲ್ಲಿ ಕೂಡಾ ಸಿದ್ಧ ಆಹಾರ ವಿತರಣೆಯ ಸೌಕರ್ಯವನ್ನು ಮರುಚಾಲನೆಗೊಳಿಸಲು ಆದೇಶವನ್ನು ನೀಡಲಾಗಿತ್ತು. ಇದೀಗ ರೈಲ್ವೇ ಮಂಡಳಿಯು ಕೂಡ ಅದೇ ರೀತಿಯಲ್ಲಿ ಸಾಗಿದೆ.


ಭಾರತೀಯ ರೈಲ್ವೆಯು ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ರೈಲಿನಲ್ಲಿ ಆಹಾರ ಸರಬರಾಜು ಮಾಡುವುದನ್ನು ನಿಲ್ಲಿಸಿತ್ತು. ಈಗ ದೇಶದಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣದಲ್ಲಿದೆ. ಹಾಗಾಗಿ ಈ ಸೇವೆಯನ್ನು ಮತ್ತೆ ಪ್ರಾರಂಭಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಇದು ರೈಲು ಪ್ರಯಾಣಿಕರಿಗೆ ಖುಷಿಯನ್ನು ತಂದಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments