ಹೊಸದಿಲ್ಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 10ನೇ ಕಂತನ್ನು ಹೊಸ ವರ್ಷದ ಮೊದಲ ದಿನವೇ ಜನವರಿ 1ರಂದು ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಏಕಕಾಲದಲ್ಲಿ ದೇಶದ 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ತಲಾ₹2,000 ರೂ ಜಮೆಯಾಗಲಿದೆ.
ಪ್ರಧಾನಿ ಮೋದಿಯವರು ಜ. 1ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರೈತರನ್ನು ಉದ್ದೇಶಿಸಿ ಮಾತನಾಡಲಿರುವರು. ಇದೇ ಸಂದರ್ಭದಲ್ಲಿ ಪಿಎಂಕಿಸಾನ್ ಯೋಜನೆಯ 10ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಜೊತೆಗೆ 351 ಕೃಷಿ ಉತ್ಪನ್ನ ಸಂಘಟನೆಗಳಿಗೆ (ಎಫ್.ಪಿ.ಒ) 14 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವರು. ಇದರಿಂದ 1.24 ಲಕ್ಷ ರೈತ ಕುಟುಂಬಗಳಿಗೆ ಪ್ರಯೋಜನ ಆಗಲಿದೆ.
ಈ ಕಾರ್ಯಕ್ರಮದಲ್ಲಿ ಮೋದಿಯವರು ಎಫ್.ಪಿ.ಒ ಸಂಘಟನೆಯ ಸದಸ್ಯರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಛೇರಿಯು ಮಾಹಿತಿ ಒದಗಿಸಿದೆ. ಈ ಕಾರ್ಯಕ್ರಮವು www.pmindiawebcast.nic.in ಹಾಗೂ ದೂರದರ್ಶನದಲ್ಲಿ ನೇರಪ್ರಸಾರವಾಗಲಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments