ಸಭೆಯಲ್ಲಿ ಭಾಗವಹಿಸುವಂತೆ ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೂ ಅಹ್ವಾನ ನೀಡಲಾಗಿದೆ. ಸಭೆಯಲ್ಲಿ ಸರಕು ಮತ್ತು ಸೇವೆಗಳ ಮೇಲೆ ನೀಡಲಾಗಿರುವ ತೆರಿಗೆ ವಿಷಯದ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯದ ಹಣಕಾಸು ವಿಚಾರಗಳ ಬಗ್ಗೆ ಅವಲೋಕಿಸಲಿದ್ದಾರೆ. ಇದೀಗ ರಾಜ್ಯದ ಹಣಕಾಸು ಇಲಾಖೆಯನ್ನು ಸಿ.ಎಂ ಬಸವರಾಜ್ ಬೊಮ್ಮಾಯಿ ಅವರೇ ನಿಭಾಯಿಸುತ್ತಿದ್ದಾರೆ.
ಹೊಸ ವರ್ಷದಿಂದ ಯಾವೆಲ್ಲ ವಸ್ತುಗಳ ಮೇಲೆ ಜಿ.ಎಸ್.ಟಿ ದರ ಎಷ್ಟು ಶೇಕಡದಲ್ಲಿ ಬೀಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ. ಎಲ್ಲಾ ರಾಜ್ಯದ ಹಣಕಾಸು ಸಚಿವರು ವರ್ಚುವಲ್ ಕಾರ್ಯಕ್ರಮದ ಮೂಲಕ ಸಭೆಗೆ ಹಾಜರಾಗುವ ಸಾಧ್ಯತೆ ಇದೆ.
0 Comments