ತಮಿಳುನಾಡಿನ ಕೂನೂರ್ ಬಳಿಯ ಅವಶೇಷಗಳಿಂದ ನಿರ್ಣಾಯಕ ಫ್ಲೈಟ್ ರೆಕಾರ್ಡರ್ ಪತ್ತೆಯಾಗಿದೆ. ವೆಲ್ಲಿಂಗ್ಟನ್ ನಲ್ಲಿ ಹೆಲಿಕಾಪ್ಟರ್ ನಿಂದ ಇಳಿಯಲು ಕೇವಲ ಏಳು ನಿಮಿಷಗಳು ಮಾತ್ರ ಬೇಕಾಗಿತ್ತು. ಆದರೆ ತುರ್ತು ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಈ ಘಟನೆ ನಡೆದಿದ್ದು ಆಘಾತ ತಂದಿದೆ.
"ಬುಧವಾರ ಬೆಳಿಗ್ಗೆ 11. 48ಕ್ಕೆ ಸೂಲೂರು ವಾಯುನೆಲೆಯಿಂದ ವಿಮಾನ ಟೇಕಾಫ್ ಆಗಿದ್ದು ಮದ್ಯಾಹ್ನ 12. 15ಕ್ಕೆ ವೆಲ್ಲಿಂಗ್ಟನ್ನಲ್ಲಿ ಇಳಿಯುವ ನಿರೀಕ್ಷೆ ಇತ್ತು. ಆದರೆ ಮದ್ಯಾಹ್ನ 12.8 ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ಹೆಲಿಕಾಪ್ಟರ್ ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು" ಎಂದು ಸಿಂಗ್ ಹೇಳಿದರು.
ಈ ನಿರ್ಣಾಯಕ ಸಂದರ್ಭದಲ್ಲಿ ಏನಾಯಿತು ಎಂಬುದನ್ನು IAF ತರಬೇತಿ ಕಮಾಂಡರ್ ನ ಮುಖ್ಯಸ್ಥ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದ ತ್ರಿ ಸೇವಾ ವಿಚಾರಣೆಯು ಪರಿಶೀಲನೆ ನಡೆಸಲಿದೆ. ಮೊನ್ನೆ ನಡೆದ ಅವಘಡ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆಯಾ ಅಥವಾ ಮಾನವನ ದೋಷದಿಂದ ಆದದ್ದೋ ಎಂದು ತನಿಖೆ ನಡೆಸಲಿದೆ.
0 Comments