ವೈರಲ್ ಆದ ವೀಡಿಯೋದಿಂದ ತೆಗೆಯಲಾದ ಸ್ಕ್ರೀನ್‌ಶಾಟ್ ಚಿತ್ರ
ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರದ ಭದ್ರತೆಗಾಗಿ ನಿಯೋಜಿತನಾದ ಕೇರಳದ ಪೊಲೀಸನೊಬ್ಬ ಸ್ವಾಮಿ ಅಯ್ಯಪ್ಪನ ಭಾವಚಿತ್ರದ ಬ್ಯಾನರ್‌ಗೆ ಬೂಟುಗಾಲಿನಿಂದ ಒದ್ದು ಅವಮಾನಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೇಶದ ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಆರಾಧಿಸುವ ಸ್ವಾಮಿ ಅಯ್ಯಪ್ಪನ ಫೋಟೋ ಇರುವ ಬ್ಯಾನರ್ ಒಂದನ್ನು ಭದ್ರತಾ ಕೌಂಟರ್‌ನ ಮೇಜಿನ ಪಾರ್ಶ್ವದಲ್ಲಿ ಹಾಕಲಾಗಿತ್ತು. ಅದೇ ಮೇಜಿನ ಮೇಲೆ ಕುಳಿತು ಆ ಬ್ಯಾನರ್‌ನಲ್ಲಿ ಇರುವ ಸ್ವಾಮಿ ಅಯ್ಯಪ್ಪನ ಭಾವಚಿತ್ರಕ್ಕೆ ಈ ಮತಾಂಧ ಪೊಲೀಸ್ ಸಿಬ್ಬಂದಿ ಬೂಟುಗಾಲಿನಿಂದ ಒದೆಯುತ್ತಿರುವ ದೃಶ್ಯ ಇದಾಗಿದೆ.
ಇದು ಯಾವ ಕೋನದಿಂದ ನೋಡಿದರೂ ಖಂಡಿತವಾಗಿಯೂ ಅರಿವಿಲ್ಲದೆ ಆದ ಪ್ರಮಾದದಂತೆ ಗೋಚರಿಸುತ್ತಿಲ್ಲ. ಹಿಂದೂ ದೇವ-ದೇವತೆಗಳನ್ನು ಅವಮಾನಿಸುವ ಸರಕಾರಿ ಅಧಿಕಾರಿಗಳ ಬಹುದೊಡ್ಡ ವರ್ಗ ಕೇರಳದಲ್ಲಿದೆ. ಇದನ್ನು ಅಲ್ಲಿನ ಕಮ್ಯೂನಿಸ್ಟ್ ಸರಕಾರ ಪೋಷಿಸುತ್ತಲೇ ಬಂದಿದೆ. ಈತನಿಗೆ ಕಠಿಣ ಶಿಕ್ಷೆಯಾಗುವಂತೆ ಕೇರಳದ ಪೊಲೀಸ್ ಇಲಾಖೆ ಮತ್ತು ಸರಕಾರದ ಮೇಲೆ ಪ್ರಜ್ಞಾವಂತ ನಾಗರಿಕರು ಒತ್ತಡ ಹೇರಬೇಕಾಗಿದೆ.
ವೈರಲ್ ಆಗುತ್ತಿರುವ ಈ ವೀಡಿಯೋ ಹೊಸದೋ, ಹಳೆಯದೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೆ ಇದರಲ್ಲಿ ಕಂಡುಬರುತ್ತಿರುವ ಘಟನೆ ಮಾತ್ರ ನೈಜವಾಗಿದ್ದು, ಆರೋಪಿ ಪೊಲೀಸನ ಗುರುತು ಪತ್ತೆ ಮಾಡುವುದು ಕಷ್ಟವೇನೂ ಅಲ್ಲ. ಮುಖದಲ್ಲಿ ಮಾಸ್ಕ್ ಹಾಕಿ ಕೊಂಡಿದ್ದರೂ ಒಂದು ಹಂತದಲ್ಲಿ ಅದನ್ನು ಸ್ವಲ್ಪ ಆತ ಸರಿಸುತ್ತಾನೆ. ಅಲ್ಲೇ ಇದ್ದ ಭಕ್ತರೊಬ್ಬರು ಆತನಿಗೆ ಅರಿವಾಗದಂತೆ ಈ ವೀಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments