ಪಣಜಿ: 1961 ಡಿಸೆಂಬರ್ 19 ರಂದು ಪೋರ್ಚುಗೀಸರ ಹಿಡಿತದಿಂದ ಗೋವಾ ವಿಮೋಚನೆಗೊಂಡಿತು. ಅಂದು ಗೋವಾ ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಗಣರಾಜ್ಯದೊಳಗೆ ವಿಲೀನಗೊಂಡ ದಿನ.
ಪೋರ್ಚುಗೀಸರ ಆಳ್ವಿಕೆಯಿಂದ ಗೋವಾವನ್ನು ಮುಕ್ತಗೊಳಿಸಲು ಭಾರತೀಯ ಸೇನಾ ಪಡೆ ' ಆಪರೇಶನ್ ವಿಜಯ್' ಪ್ರಾರಂಭಿಸಿತ್ತು. ಅದರ ಗೆಲುವನ್ನು ಸ್ಮರಿಸಲು ಪ್ರತೀ ವರ್ಷ ಡಿಸೆಂಬರ್ 19 ರಂದು "ಗೋವಾ ವಿಮೋಚನಾ ದಿನ "ವನ್ನು ಆಚರಿಸುತ್ತೇವೆ.
ಈ ಹಿನ್ನೆಲೆ ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಗೋವಾಕ್ಕೆ ಭೇಟಿ ನೀಡಲಿದ್ದು ಹಿರಿಯ ಯೋಧರನ್ನು ಸನ್ಮಾನಿಸಿ ಹಲವು ಪ್ರಗತಿಪರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
0 Comments