ಲಂಡನ್: ಬ್ರಿಟನ್ ನಲ್ಲಿ ಓಮಿಕ್ರಾನ್ ತಳಿ ಕೊರೋನಾ ವೈರಸ್ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.ಶನಿವಾರ ಸಂಜೆಯ ವೇಳೆಗೆ ಹೊಸ ತಳಿ ಪ್ರಕರಣಗಳು 25,000 ಕ್ರಮಿಸಿದೆ.
ಕೋವಿಡ್ ನ ಹೊಸ ತಳಿಯಾದ ಓಮಿಕ್ರಾನ್ ಹೆಚ್ಚೇನೂ ಅಪಾಯಕಾರಿಯಲ್ಲ ಎಂಬ ಅಭಿಪಯ ವ್ಯಕ್ತವಾಗಿದೆ. ಆದರೂ ಕೂಡ ಬ್ರಿಟನ್ ನಲ್ಲಿ ಇದರಿಂದಾಗಿ 7 ಜನ ವ್ಯಕ್ತಿಗಳು ಮೃತರಾಗಿರುವುದು ಭಯದ ವಾತಾವರಣ ಸೃಷ್ಠಿಸಿದೆ. ಆಸ್ಪತ್ರೆಗೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಾಖಲಾಗುತ್ತಿದ್ದಾರೆ.
ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಸಾರ್ವಜನಿಕ ಸಂಸ್ಥೆಗಳು ಮತ್ತು ಹೆಚ್ಚಿನ ಕೇಂದ್ರ ಸರ್ಕಾರಿ ನೆರವಿನ ನಡುವೆ ಸಮೀಪದ ಸಮನ್ವಯತೆಗೆ ಅವಕಾಶ ನೀಡುವಂತೆ 'ಗಂಭೀರ ಪರಿಣಾಮ ಸನ್ನಿವೇಶ" ದ ಘೋಷಣೆ ಮಾಡಿದ್ದಾರೆ. ಲಂಡನ್ ನಲ್ಲಿ ಕೋವಿಡ್ 19 ಆಸ್ಪತ್ರೆ ದಾಖಲೀಕರಣ ಈ ವಾರ ಶೇಕಡ 30 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
0 Comments