ರೈತರ ಪ್ರತಿಭಟನೆ ಮುಕ್ತಾಯ: ಡಿ. 11 ರಂದು ಜಾಗ ಖಾಲಿ ಮಾಡಲಿರುವ 'ಹೋರಾಟ'ಗಾರರು

Ad Code

ರೈತರ ಪ್ರತಿಭಟನೆ ಮುಕ್ತಾಯ: ಡಿ. 11 ರಂದು ಜಾಗ ಖಾಲಿ ಮಾಡಲಿರುವ 'ಹೋರಾಟ'ಗಾರರು



ನವದೆಹಲಿ: ರಾಷ್ಟ್ರದ ರಾಜಧಾನಿಯ ಗಡಿಯಲ್ಲಿ ಪ್ರತಿಭಟನಾನಿರತ ರೈತರು ತಮ್ಮ ಆಂದೋಲನವನ್ನು ಅಮಾನತುಗೊಳಿಸಲು ನಿರ್ಧರಿಸಿದ್ದಾರೆ. ಅವರು ಡಿಸೆಂಬರ್ 11 ರಂದು ತಮ್ಮ ಪ್ರತಿಭಟನಾ ಜಾಗವನ್ನು ಖಾಲಿ ಮಾಡಲು ನಿರ್ಧರಿಸಿದ್ದಾರೆ. ಆದರೂ ಕೂಡ ರೈತರ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ಹೋರಾಟ ಮುಂದುವರೆಯುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದ್ದಾರೆ.

ಸದ್ಯಕ್ಕೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ರೈತರು ಈ ಚಳುವಳಿಯನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಇದು ತಾತ್ಕಾಲಿಕ ಅಮಾನತು ಅಷ್ಟೆ" ಎಂದು ರಾಜೇವಾಲ್ ಹೇಳಿದ್ದಾರೆ.

ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯನ್ನು ಡಿಸೆಂಬರ್ 10 ನಿಗದಿಪಡಿಸಿದ ಹಿನ್ನೆಲೆ ಡಿಸೆಂಬರ್ 11ರಂದು ಆಂದೋಲನಕ್ಕೆ ವಿರಾಮ ಕೊಡಲಾಗುವುದು ಎಂದು ರೈತರು ತಿಳಿಸಿದ್ದಾರೆ.
ಆದರೆ ಎಸ್.ಕೆ.ಎಮ್ ರಾಷ್ಟ್ರೀಯ ಸಮಾವೇಶವು ಜನವರಿ 15 ರಂದು ಮತ್ತೆ ಹೊಸದಿಲ್ಲಿಯಲ್ಲಿ ಸಭೆ ಸೇರಲು ನಿರ್ಧರಿಸಿದೆ.

ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಮತ್ತು ಸತ್ತವರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಸರ್ಕಾರ ತನ್ನ ಬದ್ಧತೆಯನ್ನು ಉಳಿಸಿಕೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ರೈತರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಮತ್ತು ಬಾಕಿ ಇರುವ ತಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.


Post a Comment

0 Comments