ಹೊಸದಿಲ್ಲಿ: ಸೇನಾ ಹೆಲಿಕಾಪ್ಟರ್ ಪತನದ ವೇಳೆ ಮೃತಪಟ್ಟವರನ್ನು ವೆಲ್ಲಿಂಗ್‌ಟನ್‌ನಿಂದ ಕೊಯಮತ್ತೂರಿನ ಸುಲೂರ್ ಏರ್‌ಫೋರ್ಸ್ ಬೇಸ್‌ಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯುತ್ತಿರುವ ವಿಡಿಯೋ ವನ್ನು ಪ್ರಸಾರ ಭಾರತಿ ಸುದ್ದಿ ಸಂಸ್ಥೆ ಕೂ ನಲ್ಲಿ ಹಂಚಿಕೊಂಡಿದೆ.
ಬುಧವಾರ ತಮಿಳುನಾಡಿನ ಕೂನೂರಿನ ಸಮೀಪ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಪತನಗೊಂಡಿತ್ತು. ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿಯ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ ಪತನವಾಗಲು ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಹೆಲಿಕಾಪ್ಟರ್ ಹಾರಾಟ ನಡೆಸಿದ್ದ ಮಾರ್ಗದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಸಂಚಾರ ಮಾರ್ಗದ ಗೋಚರತೆಯಲ್ಲಿ ಉಂಟಾಗಿರುವ ಅಸ್ಪಷ್ಟತೆಯಿಂದ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಆಂಬ್ಯುಲೆನ್ಸ್ ಸಾಗುವಾಗ ಕಣ್ಣೀರಿಟ್ಟ ಜನ:
ಆಂಬ್ಯುಲೆನ್ಸ್ ಹೋಗುತ್ತಿರುವ ದಾರಿಯಲ್ಲಿ ಜನಸಾಮಾನ್ಯರು ಕಣ್ಣೀರಿಡುತ್ತಿರುವ ಮತ್ತೊಂದು ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಕೂ ನಲ್ಲಿ ಹಂಚಿಕೊಂಡಿದ್ದು, ಇದೊಂದು ಹೃದಯವಿದ್ರಾವಕ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
0 Comments