ಶ್ರೀಲಂಕಾವನ್ನು 9 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದ ಭಾರತ

Ad Code

ಶ್ರೀಲಂಕಾವನ್ನು 9 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದ ಭಾರತ

ದುಬೈ: ಇಲ್ಲಿ ಶುಕ್ರವಾರ ನಡೆದ ಅಂಡರ್- 19 ಏಷ್ಯಾಕಪ್ ಫೈನಲ್ ಹಣಾಹಣಿ ಮಳೆ ಹೊಡೆತಕ್ಕೆ ಸಿಲುಕಿದರೂ ಭಾರತ ತಂಡವು ಡಿಎಲ್ಎಸ್ ನಿಯಮದ ಮೂಲಕ ಶ್ರೀಲಂಕಾವನ್ನು 9 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಬ್ಯಾಟಿಂಗ್ ಮಾಡಿದ ಶ್ರೀಲಂಕಾ 38 ಓವರ್ ಗಳಲ್ಲಿ 9 ವಿಕೆಟ್ ಗೆ 106 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕವಾಗಿ ಆಂಗ್ಕ್ರಿಶ್ ರಘುವಂಶಿ ಅದ್ಭುತ ಅರ್ಧ ಶತಕ ಗಳಿಸಿದರು. ಶೇಕ್ ರಶೀದ್ ಸಹ 31 ರನ್ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಎಡಗೈ ಸ್ಪಿನ್ನರ್ ವಿಕಿ ಓಸ್ಟ್ವಾಲ್ 11ಕ್ಕೆ 3 ವಿಕೆಟ್ ಮಿಂಚಿದರು. ಆಫ್ ಸ್ಪಿನ್ನರ್ ಕೌಶಲ್ ತಾಂಬೆ ಎರಡು ವಿಕೆಟ್ ಪಡೆದರು. ಒಟ್ಟಾರೆ ಶ್ರೀಲಂಕಾವನ್ನು 9 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ತಂಡ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತಂದುಕೊಟ್ಟಿದೆ.

Post a Comment

0 Comments