ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣಕ್ಕೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ : ಅಮಿತ್ ಶಾ

Ad Code

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣಕ್ಕೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ : ಅಮಿತ್ ಶಾ

ಅಯೋಧ್ಯೆ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶುಕ್ರವಾರ ರಾಮ ಜನ್ಮಭೂಮಿ ತೀರ್ಥ ದೇಗುಲಕ್ಕೆ ಭೇಟಿ ನೀಡುವ ಮೂಲಕ ಅಯೋಧ್ಯೆಗೆ ಭೇಟಿ ಆರಂಭಿಸಿದರು.

ನಿರ್ಮಾಣ ಹಂತದಲ್ಲಿರುವ ರಾಮ ಜನ್ಮ ಭೂಮಿ ದೇಗುಲದ ಆವರಣದಲ್ಲಿ ಸಸಿ ನೆಟ್ಟ ಗೃಹ ಸಚಿವರು, ಬಳಿಕ ಶ್ರೀರಾಮನಿಗೆ ಪೂಜೆ ಸಲ್ಲಿಸಿದರು. ಹಾಗೂ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ  ಮಾತನಾಡಿದ ಅಮಿತಾ ಷಾ 'ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿದ್ದರೂ ಭವ್ಯವಾದ ರಾಮಮಂದಿರ ನಿರ್ಮಾಣವನ್ನು ತಡೆಯಲು ಯಾರೊಬ್ಬನಿಂದಲೂ ತಡೆಯಲು ಸಾಧ್ಯವಿಲ್ಲ' ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರ ಮೋದಿಯವರು ಪ್ರಧಾನಿಯಾದರು. 75 ವರ್ಷಗಳ ಹಿಂದೆ ಅಂದಿನ ಗೃಹ ಸಚಿವರು ಸೋಮನಾಥ ದೇವಾಲಯವನ್ನು ನಿರ್ಮಿಸಿದರು. ಅವಿರತ ಶ್ರಮಕ್ಕೆ ತಕ್ಕ ಫಲ ಖಂಡಿತವಾಗಿಯೂ ಸಿಗಲಿದೆ. ಮುಂದೆ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಅಮಿತ್ ಷಾ ಹೇಳಿದರು.

Post a Comment

0 Comments