ರಾಷ್ಟ್ರಪತಿ 3 ದಿನಗಳ ಬಾಂಗ್ಲಾ ಪ್ರವಾಸ ನಾಳೆಯಿಂದ

Ad Code

ರಾಷ್ಟ್ರಪತಿ 3 ದಿನಗಳ ಬಾಂಗ್ಲಾ ಪ್ರವಾಸ ನಾಳೆಯಿಂದ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರದಿಂದ ಒಟ್ಟು ಮೂರು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ಬಾಂಗ್ಲಾದೇಶದ 50 ನೇ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿಯವರು ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. 

ಈ ವೇಳೆ 1971 ರ ವಿಮೋಚನಾ ಯುದ್ಧದಲ್ಲಿ ಬಳಸಲಾಗಿದ್ದ "ಟಿ - 55 " ಮತ್ತು "ಮಿಗ್- 29"  ಯುದ್ಧ ವಿಮಾನವನ್ನು ಬಾಂಗ್ಲಾದ ರಾಷ್ಟ್ರಪತಿ ಅಬ್ದುಲ್ ಹಮೀದ್ ಅವರಿಗೆ ಕೊಡುಗೆಯಾಗಿ ನೀಡಲಿದ್ದಾರೆ. ಅದನ್ನು ಬಾಂಗ್ಲಾದ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರದರ್ಶಿಸಲಾಗುತ್ತದೆ.


Post a Comment

0 Comments