ಪ್ರಧಾನಿ ನಡತೆ ಸಿದ್ದುಗೆ ಮಾದರಿಯಾಗಲಿ: ಈಶ್ವರಪ್ಪ

Ad Code

ಪ್ರಧಾನಿ ನಡತೆ ಸಿದ್ದುಗೆ ಮಾದರಿಯಾಗಲಿ: ಈಶ್ವರಪ್ಪ

 




ಶಿವಮೊಗ್ಗ: ಮೊನ್ನೆ ತಾನೇ ಪ್ರಧಾನಿ ಮೋದಿ  ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮುಖಾಮುಖಿ ಭೇಟಿ ಆಗಿದ್ದು , ಆ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ನಡುವೆ " ಮೋದಿ ದೇವೇಗೌಡರಿಗೆ ಅದೆಷ್ಟು ಗೌರವ ಕೊಟ್ಟರೆಂದು ಸಿದ್ಧ ರಾಮಯ್ಯ ನೋಡಿ ಕಲಿಯಲಿ. ಅವರ ನಡತೆ ಇವರಿಗೆ ಪ್ರೇರಣೆಯಾಗಲಿ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ಬಾಯಿಗೆ ಬಂದಂತೆ ಬಿಜೆಪಿ ಮುಖಂಡರನ್ನು , ರಾಜಕೀಯ ನಾಯಕರನ್ನು ಹೀಯಾಳಿಸುವುದನ್ನು ನಿಲ್ಲಿಸಲಿ.ಅಂಥವರಿಗೆ ನಾಗರಿಕತೆ ಅವಶ್ಯಕತೆ ಇದೆ " ಎಂದು ಹೇಳಿದರು. 

ಪಕ್ಷಕ್ಕಿಂತ ಕೆಲಸಕ್ಕೆ ಪ್ರಾಮುಖ್ಯತೆ ಕೊಡುವುದನ್ನು ಮೊದಲು ಕಲಿಯಬೇಕು.ಒಳ್ಳೆಯದನ್ನು ಮಾಡುವಾಗ ಅದನ್ನು ಪ್ರೋತ್ಸಾಹಿಸುವ ಗುಣ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.

Post a Comment

0 Comments