ನಾಳೆ ಭೂಮಿ ಸಮೀಪಿಸಲಿದೆ ಲಿಯೋನಾರ್ಡ್ ಧೂಮಕೇತು; 35,000 ವರ್ಷಕ್ಕೊಮ್ಮೆ ಬರುವುದಂತೆ ಇದು

Ad Code

ನಾಳೆ ಭೂಮಿ ಸಮೀಪಿಸಲಿದೆ ಲಿಯೋನಾರ್ಡ್ ಧೂಮಕೇತು; 35,000 ವರ್ಷಕ್ಕೊಮ್ಮೆ ಬರುವುದಂತೆ ಇದು

ವಾಷಿಂಗ್ಟನ್:  ಆಗಸದಲ್ಲಿ ನಾಳೆ (ಡಿ.12) ವಿಸ್ಮಯವೊಂದು ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಬರೋಬ್ಬರಿ 35 ಸಾವಿರ ವರ್ಷಗಳ ಬಳಿಕ ಲಿಯೋನಾರ್ಡ್ ಹೆಸರಿನ ಧೂಮಕೇತು ಭೂಮಿ ಸಮೀಪ ಬರುತ್ತಿದೆ. ಈ ಧೂಮಕೇತು ತುಂಬಾ ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿನಿಂದ ನೋಡಬಹುದಾಗಿದೆ.

ಈ ಲಿಯೋನಾರ್ಡ್  ಸೌರವ್ಯೂಹದ ತೀವ್ರ ವ್ಯಾಪ್ತಿಯಿಂದ ದೀರ್ಘಾವಧಿಯ ಧೂಮಕೇತುವಾಗಿದೆ. ಇದು 80,000 ವರ್ಷದ ಕಕ್ಷೆಯನ್ನು ಹೊಂದಿದೆ. ಇದು ಹಸಿರು ಹೊಳಪಿನ ಹೊದಿಕೆಯೊಂದಿಗೆ ಭೂಮಿಗೆ ಸಮೀಪದಲ್ಲಿ ಹಾದುಹೋಗುತ್ತದೆ. ಅಲ್ಲದೆ ಇದು ತಿಂಗಳಾಂತ್ಯದವರೆಗೆ ಗೋಚರಿಸುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ. 

ಡಿಸೆಂಬರ್ 14 ರಂದು ಸೂರ್ಯಾಸ್ತದ ನಂತರ, ಧೂಮಕೇತು ಸಂಜೆ ಆಕಾಶದಲ್ಲಿ ಗೋಚರಿಸುತ್ತದೆ. ಖಗೋಳಶಾಸ್ತ್ರಜ್ಞರು ಡಿಸೆಂಬರ್ 17 ರಂದು ಅದನ್ನು ನೋಡುವುದು ಉತ್ತಮ ದಿನ ಎಂದು ನಂಬುತ್ತಾರೆ. 

ಈ ಧೂಮಕೇತು ಭೂಮಿಯಿಂದ ಸುಮಾರು 523 ಶತಕೋಟಿ ಕಿ.ಮೀ ದೂರದಲ್ಲಿದೆ. ಇದನ್ನು ಬೈನಾಕ್ಯುಲರ್ ಅಥವಾ ದೂರದರ್ಶಕವಿದ್ದರೆ ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.  ಮತ್ತು ಇಟಲಿಯ ರೋಮ್ ನಲ್ಲಿ ವರ್ಚುವಲ್  ಟೆಲಿಸ್ಕೋಪ್ ಪ್ರಾಜೆಕ್ಟ್  ಈ ಧೂಮಕೇತುವಿಗೆ ರಾತ್ರಿ 11.15 ಕ್ಕೆ ಉಚಿತ ಇಂಟರ್ನೆಟ್ ವೀಕ್ಷಣೆ ಕಾರ್ಯಕ್ರಮ ಆಯೋಜಿಸುತ್ತದೆ.

ವಿಶ್ವದ ಪ್ರಸಿದ್ಧ ಖಗೋಳಶಾಸ್ತ್ರಜ್ಞ ಗ್ರೆಗೊರಿ ಜೆ. ಲಿಯೋನಾರ್ಡ್ ಅವರು ಈ ಧೂಮಕೇತುವನ್ನು ಕಂಡುಹಿಡಿದಿದ್ದಾರೆ.


Post a Comment

0 Comments