ಸದ್ಯಕ್ಕೆ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಗೆ ಸ್ಥಾನ ಸಿಗದು

Ad Code

ಸದ್ಯಕ್ಕೆ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಗೆ ಸ್ಥಾನ ಸಿಗದು

ಹೊಸದಿಲ್ಲಿ: ತುಳು ಭಾಷೆ ಸದ್ಯ ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರ್ಪಡೆಗೊಳ್ಳುವ ಸಾಧ್ಯತೆಗಳಿಲ್ಲ. ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಸದ್ಯ ತುಳುಭಾಷೆಗೆ ಅವಕಾಶ ಇಲ್ಲ ಎಂದು ಉತ್ತರಿಸಿದ್ದಾರೆ.

ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಆಗ್ರಹ ಇರುವುದು ಸರ್ಕಾರದ ಗಮನದಲ್ಲಿದೆ. ಆದರೆ ಭಾಷೆ- ಉಪಭಾಷೆಗಳ ವಿಕಾಸ ಒಂದು ಸತತ ಪ್ರಯತ್ನವಾಗಿದ್ದು ಸಾಮಾಜಿಕ, ಆರ್ಥಿಕ, ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ. ಹೀಗಿರುವಾಗ ತುಳು ಭಾಷೆಯನ್ನು ಕೂಡ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೆಲವು ಮಾನದಂಡಗಳನ್ನು ರೂಪಿಸುವುದು ಕಠಿಣ ಎಂದು ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.

ತುಳು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುವಂತೆ ಕರಾವಳಿ ಭಾಗದಲ್ಲಿ ಅನೇಕ ರೀತಿಯ ಪ್ರತಿಭಟನೆಗಳು, ಟ್ವಿಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

Post a Comment

0 Comments