ಗ್ರಾಹಕರಿಗೆ ತಲೆಬಿಸಿಯಾದ ತರಕಾರಿ ಬೆಲೆ ಏರಿಕೆ

Ad Code

ಗ್ರಾಹಕರಿಗೆ ತಲೆಬಿಸಿಯಾದ ತರಕಾರಿ ಬೆಲೆ ಏರಿಕೆ


ಇತ್ತೀಚೆಗೆ ಭಾರತದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ಹವಾಮಾನ ಕೂಡ ವೈಪರೀತ್ಯವಾಗುತ್ತಿದೆ. ದಿನದಿನಕ್ಕೆ ಬದಲಾಗುತ್ತಿರುವ ಈ ವಾಯುಗುಣದಿಂದಾಗಿ ರೈತರ ಬದುಕು ಕೂಡ ಕಂಗಾಲಾಗಿದೆ. ಈ ಹವಾಮಾನ ಬದಲಾವಣೆಯಿಂದಾಗಿ  ಕೃಷಿಯ ಮೇಲೆ ಮಹತ್ತರವಾದ ಬದಲಾವಣೆಗಳು ಆಗುತ್ತಿವೆ. ಸತತ ಮಳೆಯಿಂದ ದಕ್ಷಿಣಭಾರತದ ಚಿಲ್ಲರೆ ಮಾರುಕಟ್ಟೆಯ ತರಕಾರಿ ಬೆಲೆಗಳು ಕೂಡ ಗಗನಕ್ಕೇರಿವೆ. 

ಮುಖ್ಯವಾಗಿ ಮನೆಯಲ್ಲಿ ದಿನನಿತ್ಯ ಬಳಸುವ ಟೊಮೆಟೋ ಬೆಲೆ ಕೆಜಿಗೆ 140ರೂಪಾಯಿ ದಾಖಲಾಗಿದೆ. ಉತ್ತರದ ರಾಜ್ಯಗಳಲ್ಲಿ ಪ್ರತೀ ಕೆಜಿ ಟೊಮೆಟೋ ಬೆಲೆ ರೂಪಾಯಿ 30 ರಿಂದ ಇದ್ದು 85ರವರೆಗೆ ಇದೆ. ಪಶ್ಚಿಮ ಪ್ರದೇಶಗಳಲ್ಲೂ ಟೊಮೆಟೋ ಬೆಲೆ ಹೆಚ್ಚಾಗಿರುವುದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಕರ್ನಾಟಕದ ಮಂಗಳೂರು ಹಾಗೂ ತುಮಕೂರಿನಲ್ಲಿ ಪ್ರತೀ ಕೆಜಿ ಟೊಮೆಟೋ ಬೆಲೆ ರೂಪಾಯಿ 100 ಹಾಗೂ ಧಾರವಾಡದಲ್ಲಿ ಕೆಜಿಗೆ ರೂಪಾಯಿ 75 ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Post a Comment

0 Comments