ವಿಶ್ವ ಮಾಲಿನ್ಯ ನಿಯಂತ್ರಣ ದಿನ

Ad Code

ವಿಶ್ವ ಮಾಲಿನ್ಯ ನಿಯಂತ್ರಣ ದಿನ




 ಪರಿಸರ ಎಂದರೆ ಅದು ನಾವು ಜೀವಿಸುವ ಸುತ್ತಮುತ್ತಲ ಪರಿಶುದ್ಧವಾದ ವಾತಾವರಣ. ಹಚ್ಚ ಹಸಿರಾಗಿದ್ದ ಪರಿಸರ ಇಂದು ಬೆತ್ತಲಾಗಿ ನಿಂತಿದೆ. ಆಧುನಿಕತೆಯ ಸ್ಪರ್ಶ ವಾತಾವರಣವನ್ನೇ ಹಾಳು ಮಾಡಿದೆ. ಅತಿಯಾದ ರಾಸಾಯಿನಿಕಗಳ ಬಳಕೆಯಿಂದಾಗಿ ಮಣ್ಣು ಕೂಡ ಕಲುಷಿತವಾಗುತ್ತಿದೆ. ಭೂಮಿಯ ಮೇಲಿನ ಜೀವಿಗಳಿಗೆ ಮನುಷ್ಯನ ಚಟುವಟಿಕೆಗಳೇ ಮಾರಕವಾಗುತ್ತಿದೆ. 

ಈ ಎಲ್ಲ ಕಾರಣಗಳಿಂದಾಗಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡಿಸೆಂಬರ್ 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ ಪ್ರತಿವರ್ಷ ವಾಯುಮಾಲಿನ್ಯದಿಂದಾಗಿ 70 ಮಿಲಿಯನ್  ಜನರು ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ.  

ಮಾಲಿನ್ಯ ನಿಯಂತ್ರಣ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಕೈಗಾರಿಕಾ ವಿಪತ್ತುಗಳನ್ನು ನಿರ್ವಹಿಸುವ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.ಪ್ರತಿ ನಿತ್ಯ ಮಲಿನಗೊಳ್ಳುತ್ತಿರುವ ಪರಿಸರ , ಹುಟ್ಟುತ್ತಿರುವ ರೋಗ ಇವುಗಳ ಬಗ್ಗೆ ಹೇಳಲು ಪದಗಳಿಲ್ಲ. ಇದೇ ರೀತಿ ಮಲಿನಯುಕ್ತ ಪರಿಸರದಲ್ಲಿ ಮಾನವ ಬದುಕುತ್ತಿದ್ದರೆ ಅಲ್ಪಾಯುಷಿಯಾಗುವುದು ಮಾತ್ರ ಸತ್ಯ. ಈ ದಿನ ಬರೀ ನಾಮಾಂಕಿತವಾಗಿರದೆ ಪ್ರಾಯೋಗಿಕವಾಗಿ ಅರ್ಥಪೂರ್ಣವಾಗಲಿ.

-ಅರ್ಪಿತಾ ಕುಂದರ್ 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments