ಸೆಂಚುರಿಯನ್: ಇಂದಿನಿಂದ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಾಕ್ ಮೈದಾನದಲ್ಲಿ ಶುರುವಾಗಲಿದೆ. ಇದೀಗ ಹೊಸ ಕೋಚ್ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡುತ್ತದೆಯೋ ಎಂಬ ನಿರೀಕ್ಷೆ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದು.
ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ತಾಯ್ನಾಡಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟ್ವೆಂಟಿ 20 ಕ್ರಿಕೆಟ್ ಸರಣಿಯನ್ನು ಗೆದ್ದಾಗಿದೆ.
ಉಪನಾಯಕ ಕೆ.ಎಲ್ ರಾಹುಲ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ "ಐವರು ಬೌಲರ್ ಗಳಿಗೆ ಸ್ಥಾನ ಸಿಗುವುದು ಖಚಿತವಾಗಿದೆ. ಬ್ಯಾಟಿಂಗ್ ಗೆ ಹೋಲಿಸಿದರೆ ಭಾರತದ ಬೌಲಿಂಗ್ ವಿಭಾಗವೇ ಹೆಚ್ಚು ಬಲಿಷ್ಠ ಹಾಗೂ ವೈವಿಧ್ಯಮಯ ಎನ್ನಬಹುದು" ಎಂದಿದ್ದಾರೆ.
ಇಂದು ಮದ್ಯಾಹ್ನ 1.30 ಕ್ಕೆ ಸರಿಯಾಗಿ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ.
0 Comments