15ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಜ.3ರಿಂದ ಆರಂಭ: ಪ್ರಧಾನಿ ಮೋದಿ

Ad Code

15ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಜ.3ರಿಂದ ಆರಂಭ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ಮುಖ್ಯಾಂಶಗಳು



ಹೊಸದಿಲ್ಲಿ: ಇಂದು ಕ್ರಿಸ್‌ಮಸ್ ದಿನ. ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು. ಈ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು.


ಕೊರೋನಾ ಮಹಾಮಾರಿ ಇನ್ನೂ ಪೂರ್ಣವಾಗಿ ತೊಲಗಿಲ್ಲ. ಹೊಸ ರೂಪದಲ್ಲಿ (ಒಮಿಕ್ರಾನ್) ಮತ್ತೆ ಬರುತ್ತಿದೆ. ಆದ್ದರಿಂದ ಎಚ್ಚರಿಕೆ ಹಾಗೂ ಕೋವಿಡ್ ಸಮುಚಿತ ವರ್ತನೆಗಳು ಮಾತ್ರವೇ ಸಂಪೂರ್ಣ ರಕ್ಷಣೆ ನೀಡಬಲ್ಲದು.


ಮಾಸ್ಕ್‌ ಧರಿಸುವುದನ್ನು ಬಿಡಬೇಡಿ, ಕೈಗಳನ್ನು ಸ್ವಚ್ಛಗೊಳಿಸುವುದನ್ನೂ ಮರೆಯಬೇಡಿ.



ಜನವರಿ 10ರಿಂದ ಕೋ ಮೋರ್ಬಿಡಿಟಿ ಸಾಧ್ಯತೆಯುಳ್ಳ 60 ವಯಸ್ಸು ದಾಟಿದವರಿಗೆ ವೈದ್ಯರ ಸಲಹೆಯ ಮೇರೆಗೆ ಮುನ್ನೆಚ್ಚರಿಕಾ ಲಸಿಕೆ ನೀಡಲಾಗುವುದು.


ಆರೋಗ್ಯ ಕಾರ್ಯಕರ್ತರಿಗೂ ಜ. 10ರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುವುದು.


15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಜನವರಿ 3ರ ಸೋಮವಾರದಿಂದ ಲಸಿಕೆ ನೀಡಲಾಗುವುದು. ಇದರಿಂದ ಶಾಲೆ ಕಾಲೇಜುಗಳಿಗೆ ಹೋಗುವ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಪಾಲಕರಿಗೂ ಸಮಾಧಾನ ದೊರೆಯಲಿದೆ.


ದೇಶವಾಸಿಗಳಿಗೆ ಲಸಿಕೆಯ ಬೂಸ್ಟರ್ ಡೋಸ್ ನೀಡಿಕೆಯೂ ಇಷ್ಟರಲ್ಲೇ ಆರಂಭವಾಗಲಿದೆ.


ಕಳೆದ 11 ತಿಂಗಳಿನಿಂದ ನಡೆಯುತ್ತಿರುವ ಲಸಿಕಾ ಅಭಿಯಾನ ಸಾಕಷ್ಟು ಪ್ರಗತಿ ಸಾಧಿಸಿದ್ದು, ಕೊರೊನಾ ವಿರುದ್ಧ ಸಮರದಲ್ಲಿ ಉತ್ತಮ ಫಲಿತಾಂಶ ನೀಡಿದೆ. 


ದೇಶಾದ್ಯಂತ 4 ಲಕ್ಷ ಆಕ್ಸಿಜನ್ ಸಿಲಿಂಡರ್ ವಿತರಿಸಲಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments