ನವೆಂಬರ್ ನಲ್ಲಿ 17.5 ಲಕ್ಷ ವಾಟ್ಸಾಪ್ ಖಾತೆ ಬ್ಯಾನ್

Ad Code

ನವೆಂಬರ್ ನಲ್ಲಿ 17.5 ಲಕ್ಷ ವಾಟ್ಸಾಪ್ ಖಾತೆ ಬ್ಯಾನ್

ನವದೆಹಲಿ: ವಾಟ್ಸಾಪ್ ಸಂಸ್ಥೆಯು ನವೆಂಬರ್ ತಿಂಗಳಲ್ಲಿ 17 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ.

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ 2021 ರ ಅನ್ವಯ ವಾಟ್ಸಾಪ್ ಸಂಸ್ಥೆ ಕಳೆದ ಆರು ತಿಂಗಳಿಂದ ಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದೆ. ಒಂದೇ ತಿಂಗಳಲ್ಲಿ 602 ದೂರುಗಳನ್ನು ವಾಟ್ಸಾಪ್ ಸಂಸ್ಥೆಯ ದೂರು ಪ್ರಕ್ರಿಯೆ ಸಮಿತಿಗೆ ಸಲ್ಲಿಸಲಾಗಿದ್ದು ಅದರಲ್ಲಿ 36 ರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆಯು ಮಾಸಿಕ ವರದಿಯಲ್ಲಿ ತಿಳಿಸಿದೆ.

40 ಕೋಟಿಗೂ ಅಧಿಕ ಬಳಕೆದಾರರಿರುವ ಸಂಸ್ಥೆಯು ಅಕ್ಟೋಬರ್ ನಲ್ಲಿ 20 ಲಕ್ಷ ಭಾರತೀಯ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿತ್ತು. ಹಾಗೆಯೇ ಆ ತಿಂಗಳಲ್ಲಿ 500 ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿತ್ತು.

Post a Comment

0 Comments