ಪೋಲೀಸರ ಮುಂದೆ ಶರಣಾದ 44 ನಕ್ಸಲರು

Ad Code

ಪೋಲೀಸರ ಮುಂದೆ ಶರಣಾದ 44 ನಕ್ಸಲರು

ಛತ್ತೀಸ್ ಘಡ: ಹೊಸ ವರ್ಷದ ದಿನವೇ ಸುಕ್ಮಾ ಪೋಲೀಸರ ಮುಂದೆ ಸುಮಾರು 44 ನಕ್ಸಲರು ಶರಣಾಗಿದ್ದರು. ಇದರಲ್ಲಿ 9 ಮಹಿಳಾ ನಕ್ಸಲರೂ ಸೇರಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯ ಹಲವೆಡೆ ಅಭಿಯಾನ ಕೈಗೊಂಡಿದ್ದ ಪೋಲೀಸರು ನಕ್ಸಲರಿಗೆ ಶರಣಾಗುವಂತೆ ಆದೇಶಿಸಿದ್ದರು. ಈ ಹಿನ್ನೆಲೆ ಹೊಸ ವರ್ಷದ ಮೊದಲ ದಿನವೇ  44 ನಕ್ಸಲರು ಪೋಲೀಸರಿಗೆ ಶರಣಾಗಿದ್ದಾರೆ. 300 ರಿಂದ 500 ಗ್ರಾಮಸ್ಥರು ನಕ್ಸಲರನ್ನು ಪತ್ತೆ ಹಚ್ಚಿ ಪೋಲೀಸ್ ಶಿಬಿರಕ್ಕೆ ಕರೆತಂದಿದ್ದಾರೆ.

ಈ ನಕ್ಸಲರು ಚಿಂತಗುಫಾ, ಚಿಂತಲ್ನಾರ್, ಭೆಜ್ಜಿ ಪ್ರದೇಶಗಳಲ್ಲಿ ವಿವಿಧ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಗುಂಪಿನಲ್ಲಿ ಮಹಿಳಾ ನಕ್ಸಲರು ಸೇರಿಕೊಂಡಿರುವುದು ಅಚ್ಚರಿ ತಂದಿದೆ. ಇವರನ್ನು ಪತ್ತೆ ಹಚ್ಚಿ ಮುಖ್ಯವಾಹಿನಿಗೆ ಆಹ್ವಾನಿಸಲಾಗಿದೆ.

Post a Comment

0 Comments