ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ-04 ಯಶಸ್ವಿ ಉಡಾವಣೆ

Ad Code

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ-04 ಯಶಸ್ವಿ ಉಡಾವಣೆ

 

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ನಸುಕಿನ ವೇಳೆಯಲ್ಲಿ ವೀಕ್ಷಣಾ ಉಪಗ್ರಹ EOS -04 ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದಲ್ಲಿರುವ 'ಸತೀಶ್ ಧವನ್' ಬಾಹ್ಯಾಕಾಶ ಕೇಂದ್ರದಿಂದ PSLV-C52/EOS-04 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.


ಇಂದು ಬೆಳಗ್ಗೆ 6.17 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C52 ಭೂಮಿಯ ವೀಕ್ಷಣೆ ಉಪಗ್ರಹ EOS-04, 529 ಕಿಮೀ ಎತ್ತರದ ಉದ್ದೇಶಿತ ಧ್ರುವೀಯ ಕಕ್ಷೆಗೆ ಉಡಾವಣೆಗೊಂಡಿದೆ.


ಮಿಷನ್ ಕಂಟ್ರೋಲ್‌ನಲ್ಲಿ ಹರ್ಷೋದ್ಗಾರಗಳ ನಡುವೆ, ಎಲ್ಲಾ ಮೂರು ಉಪಗ್ರಹಗಳನ್ನು ಕೂಡಾ ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂದು ಉಡಾವಣಾ ನಿರ್ದೇಶಕರು ಮಾಹಿತಿ ನೀಡಿದರು. ಉಡಾವಣೆಯ ಬಳಿಕ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, 'ಪಿಎಸ್‌ಎಲ್ ವಿ-ಸಿ 52ರ ಮಿಷನ್ ಯಶಸ್ವಿ ಉಡಾವಣೆಯನ್ನು ಸಾಧಿನೆ ಮಾಡಲಾಗಿದೆ ಎಂದು ತಿಳಿಸಿದರು.


ಭೂ ವೀಕ್ಷಣಾ ಉಪಗ್ರಹ-04 ಅನ್ನು ರಾಡಾರ್ ಇಮೇಜಿಂಗ್ ಉಪಗ್ರಹ (RISAT) ಎಂದೂ ಕರೆಯಲಾಗುತ್ತದೆ. ಇದನ್ನು ಕೃಷಿ, ತೋಟಗಳು, ಅರಣ್ಯ, ಪ್ರವಾಹ ಮ್ಯಾಪಿಂಗ್, ಮಣ್ಣಿನ ತೇವಾಂಶ ಹಾಗೂ ಜಲವಿಜ್ಞಾನದಂತಹ ಅಪ್ಲಿಕೇಶನ್‌ಗಳಿಗಾಗಿ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಮತ್ತು ಗುಣಮಟ್ಟದ ಚಿತ್ರಗಳನ್ನು ಒದಗಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಬಾಹ್ಯಾಕಾಶ ನೌಕೆಯು ಸಿ-ಬ್ಯಾಂಡ್‌ ನಲ್ಲಿ ರಿಸೋರ್ಸ್‌ಸ್ಯಾಟ್, ಕಾರ್ಟೊಸ್ಯಾಟ್ ಮತ್ತು RISAT-2B ಸರಣಿಗಳಿಂದ ಮಾಡಿದ ವೀಕ್ಷಣೆಗಳನ್ನು ಪೂರ್ಣಗೊಳಿಸುವ ವೀಕ್ಷಣಾ ಡೇಟಾವನ್ನು ಸಂಗ್ರಹ ಮಾಡುತ್ತದೆ. ಉಪಗ್ರಹವು ಒಂದು ದಶಕದ ಕಾರ್ಯಾಚರಣೆಯ ಅವಧಿಯ ಸಾಮರ್ಥ್ಯವನ್ನು ಹೊಂದಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments