ಪಣಜಿ: ಗೋವಾ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಪಣಜಿಯ ಬಿಜೆಪಿ ಶಾಸಕ ಬಾಬೂಶ್ ಮೊನ್ಸೆರಾತ್ ಮತ್ತು ಪತ್ನಿ ಜೆನಿಫರ್ ಮೊನ್ಸೆರಾತ್ ರವರ ಪ್ರಕರಣದ ವಿಚಾರಣೆಯನ್ನು ಮಾಪ್ಸಾ ಸೆಶನ್ಸ್ ನ್ಯಾಯಾಲಯವು ಫೆ.28 ರಂದು ಕೈಗೆತ್ತಿಕೊಳ್ಳಲಿದೆ.
19 ಫೆಬ್ರುವರಿ 2008 ರಂದು ಬಾಬುಶ್ ಮೊನ್ಸೆರಾತ್ ರವರು ತಮ್ಮ ಕಾರ್ಯಕರ್ತರೊಂದಿಗೆ ಪಣಜಿ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಯುವಕನೋರ್ವನ ಹಲ್ಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿತ್ತು. ಪೋಲಿಸರು ಈ ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪೋಲಿಸ್ ನಿರೀಕ್ಷಕರನ್ನು ಅಮಾನತು ಗೊಳಿಸುವಂತೆ ಆಗ್ರಹಿಸಲಾಗಿತ್ತು. ಆದರೆ ಪ್ರತಿಭಟನಾಕಾರರು ಪ್ರತಿಭಟನೆಯ ಸಂದರ್ಭದಲ್ಲಿ ಪೋಲಿಸರ ಮೇಲೆ ಪ್ಲ್ಯಾಸ್ಟಿಕ್ ಬಾಟಲಿ ಮತ್ತು ಕಲ್ಲು ಎಸೆದು ಪೋಲಿಸರ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ ಹಲವು ಪೋಲಿಸರು ಗಾಯಗೊಂಡಿದ್ದರು. ಪೋಲಿಸರು ಲಾಠಿಚಾರ್ಜ್ ಆರಂಭಿಸಿದ ಕೂಡಲೆ ಎಲ್ಲ ನಾಯಕರು ಮತ್ತು ಬೆಂಬಲಿಗರು ಪಲಾಯನಗೈದಿದ್ದರು.
ಹಲವು ವರ್ಷಗಳೇ ಕಳೆದರೂ ಕೂಡ ಈ ಪ್ರಕರಣದ ವಿಚಾರಣೆ ನಡೆಯದ ಕಾರಣ ವಕೀಲ ಐರೀಶ್ ರೋಡ್ರಿಗಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ರಾಜಕಾರಣಿಗಳ ವಿರುದ್ಧದ ಈ ಪ್ರಕರಣದ ವಿಚಾರಣೆಗೆ ಆದ್ಯತೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಕಳೆದ ಕೆಲ ತಿಂಗಳ ಹಿಂದೆ ಪಣಜಿ ಕ್ಷೇತ್ರದ ಬಿಜೆಪಿ ಶಾಸಕ ಬಾಬೂಶ್ ಮೊನ್ಸೆರಾತ್ ಬಂಧನದ ಭೀತಿ ಎದುರಿಸುತ್ತಿದ್ದರು.
ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಿಂದ ಬಿಜೆಪಿಯು ಬಾಬುಶ್ ಮೊನ್ಸೆರಾತ್ ರವರಿಗೆ ಸ್ಫರ್ಧಿಸಲು ಟಿಕೇಟ್ ನೀಡಿತ್ತು, ಅವರ ಪತ್ನಿ ಜೆನಿಫರ್ ಮೊನ್ಸೆರಾತ್ ರವರು ತಾಲಿಗಾಂವ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಫರ್ಧಿಸಿದ್ದಾರೆ. ಈ ಇಬ್ಬರ ಪ್ರಕರಣದ ವಿಚಾರಣೆ ಇದೀಗ ಮತ್ತೆ ಆರಂಭಗೊಳ್ಳಲಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments