ಗೋವಾ ಚುನಾವಣೆ: ಟಿಎಂಸಿಗೆ 12 ಸ್ಥಾನಗಳಲ್ಲಿ ಗೆಲುವಿನ ವಿಶ್ವಾಸ

Ad Code

ಗೋವಾ ಚುನಾವಣೆ: ಟಿಎಂಸಿಗೆ 12 ಸ್ಥಾನಗಳಲ್ಲಿ ಗೆಲುವಿನ ವಿಶ್ವಾಸ


ಪಣಜಿ: ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು 12 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿಕೊಂಡಿದೆ. ಟಿಎಂಸಿ ಮಿತ್ರ ಪಕ್ಷವಾದ ಎಂಜಿಪಿ ಪಕ್ಷವು 7 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ರಾಜ್ಯದ 40 ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಫೆ 14 ರಂದು ಪೂರ್ಣಗೊಂಡಿದ್ದು ಮಾರ್ಚ್‌ 10 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.


ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಗೋವಾದ ಅತ್ಯಂತ ಹಳೇಯ ಪ್ರಾದೇಶಿಕ ಪಕ್ಷ ಎಂಜಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಟಿಎಂಸಿ ಗೋವಾ ಪ್ರಮುಖ ಕಿರಣ್ ಕಾಂದೋಳಕರ್ ಪ್ರತಿಕ್ರಿಯೆ ನೀಡಿ- ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ ಏಕೈಕ ರಾಜಕೀಯ ಪಕ್ಷ ನಮ್ಮ ಪಕ್ಷವಾಗಿದೆ. ರಾಜ್ಯದಲ್ಲಿ ಟಿಎಂಸಿ ಪಕ್ಷವು ಕನಿಷ್ಠ 12 ಸ್ಥಾನಗಳನ್ನು ಗೆಲ್ಲಲಿದೆ. ನಮ್ಮ ಮಿತ್ರಪಕ್ಷ ಎಂಜಿಪಿ 7 ಸ್ಥಾನ ಗೆಲ್ಲಲಿದೆ ಎಂದು ಎಂವರು ವಿಶ್ವಾಸ ವ್ಯಕ್ತಪಡಿಸಿದರು.


ನಮಗೆ ಬಹುಮತಕ್ಕೆ ಕೆಲ ಸ್ಥಾನಗಳು ಕಡಿಮೆಯಿರಬಹುದು. ಆದರೆ ನಾವು ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಚುನಾವಣಾ ಫಲಿತಾಂಶದ ನಂತರ ಟಿಎಂಸಿ ಪಕ್ಷದಿಂದ ಎಂಜಿಪಿ ಪಕ್ಷವನ್ನು ಬೇರ್ಪಡಿಸಬಹುದು ಎಂಬ ಭಯವನ್ನು ಕಿರಣ್ ಕಾಂದೋಳಕರ್  ತಳ್ಳಿಹಾಕಿದರು. ನಮ್ಮ ಮೈತ್ರಿಯು ಚುನಾವಣಾ ಫಲಿತಾಂಶದ ನಂತರವೂ ಮುಂದುವರೆಯಲಿದೆ ಎಂದು ಕಿರಣ್ ಕಾಂದೋಳಕರ್ ವಿಶ್ವಾಸ ವ್ಯಕ್ತಪಡಿಸಿದರು.


ಸದ್ಯ ಗೋವಾದಲ್ಲಿ ನಮ್ಮ ಬಳಿ ತಳಮಟ್ಟದಿಂದ ಕೆಲಸ ಮಾಡಲು ನಮ್ಮ ಕಾರ್ಯಕರ್ತರಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 40 ವಿಧಾನಸಭಾ ಕ್ಷೇತ್ರದಲ್ಲಿಯೂ ನಮ್ಮ ಅಸ್ಥಿತ್ವವನ್ನು ತೋರಿಸಿದ್ದೇವೆ. ಗೋವಾ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ತಳಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ರಾಜ್ಯ ಟಿಎಂಸಿ ಪ್ರಮುಖ ಕಿರಣ್ ಕಾಂದೋಳಕರ್ ಹೇಳಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments