ರಕ್ತದ ಮಾದರಿಗಳಲ್ಲಿ ಪತ್ತೆಯಾದವು ಪಿಇಟಿ ಪ್ಲಾಸ್ಟಿಕ್‌ನ ಕಣಗಳು

Ad Code

ರಕ್ತದ ಮಾದರಿಗಳಲ್ಲಿ ಪತ್ತೆಯಾದವು ಪಿಇಟಿ ಪ್ಲಾಸ್ಟಿಕ್‌ನ ಕಣಗಳು


ಈ ಬಗೆಯ ಪ್ಲಾಸ್ಟಿಕ್ ಅನ್ನು ಪಾನೀಯ ಬಾಟಲಿಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ.

ಹೊಸ ಹೊಸ ರೋಗಗಳಿಗೆ ಕಾರಣವಾದೀತು ಈ ವಿಷಕಾರಿ ಪ್ಲಾಸ್ಟಿಕ್


ಪ್ಯಾರಿಸ್‌: ವಿಜ್ಞಾನಿಗಳು ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೊಪ್ಲಾಸ್ಟಿಕ್ ಅನ್ನು ಪತ್ತೆ ಮಾಡಿದ್ದಾರೆ, ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಪ್ರಮುಖ ಅಂಗಗಳಿಗೂ ಪ್ರವೇಶಿಸಬಹುದು ಎಂದು ಎಚ್ಚರಿಸಿದ್ದಾರೆ.


ಬಹುಪಾಲು ಅಗೋಚರ ಪ್ಲಾಸ್ಟಿಕ್‌ನ ಸಣ್ಣ ತುಂಡುಗಳು ಈಗಾಗಲೇ ಭೂಮಿಯ ಮೇಲಿನ ಎಲ್ಲೆಡೆ, ಆಳವಾದ ಸಾಗರಗಳಿಂದ ಎತ್ತರದ ಪರ್ವತಗಳವರೆಗೆ ಮತ್ತು ಗಾಳಿ, ಮಣ್ಣು ಮತ್ತು ಆಹಾರ ಸರಪಳಿಯಲ್ಲಿ ಕಂಡುಬಂದಿವೆ.


ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಶನಲ್ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ಡಚ್ ಅಧ್ಯಯನವು 22 ಅನಾಮಧೇಯ, ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ ಮತ್ತು ಅವರಲ್ಲಿ ಸುಮಾರು 80% ರಷ್ಟು ಸ್ಯಾಂಪಲ್‌ಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ ಕಣಗಳಿರುವುದನ್ನು ಪತ್ತೆ ಮಾಡಿದೆ.


ಅರ್ಧದಷ್ಟು ರಕ್ತದ ಮಾದರಿಗಳು PET ಪ್ಲಾಸ್ಟಿಕ್‌ನ ಕುರುಹುಗಳನ್ನು ತೋರಿಸಿವೆ. ಇದನ್ನು ಪಾನೀಯ ಬಾಟಲಿಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಮೂರನೇ ಒಂದು ಭಾಗದಷ್ಟು ಪಾಲಿಸ್ಟೈರೀನ್ ಅನ್ನು ಬಿಸಾಡಬಹುದಾದ ಆಹಾರ ಪಾತ್ರೆಗಳು ಮತ್ತು ಇತರ ಅನೇಕ ಉತ್ಪನ್ನಗಳಿಗೆ ಬಳಸಲಾಗುತ್ತದೆ.


"ಇದೇ ಮೊದಲ ಬಾರಿಗೆ ನಾವು ಮಾನವ ರಕ್ತದಲ್ಲಿ ಇಂತಹ ಮೈಕ್ರೋಪ್ಲಾಸ್ಟಿಕ್‌ಗಳನ್ನು ಪತ್ತೆಹಚ್ಚಲು ಮತ್ತು ಪ್ರಮಾಣೀಕರಿಸಲು ಸಾಧ್ಯವಾಯಿತು" ಎಂದು ಆಮ್‌ಸ್ಟರ್‌ಡ್ಯಾಮ್‌ನ ವ್ರಿಜೆ ಯೂನಿವರ್ಸಿಟಿಯ ಪರಿಸರ ವಿಜ್ಞಾನಿ ಡಿಕ್ ವೆಥಾಕ್ ಹೇಳಿದರು.


"ನಮ್ಮ ದೇಹದಲ್ಲಿ ಪ್ಲಾಸ್ಟಿಕ್‌ ಕಣಗಳು ಸೇರಿಕೊಂಡಿವೆ ಮತ್ತು ನಾವು ಪ್ಲಾಸ್ಟಿಕ್‌ ಬಳಕೆ ಮಾಡಲೇ ಬಾರದು ಎಂಬುದಕ್ಕೆ ಇದು ಪುರಾವೆಯಾಗಿದೆ" ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.


ಇದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತನಿಖೆ ಮಾಡಲು ಹೆಚ್ಚಿನ ಸಂಶೋಧನೆಗೆ ಕರೆ ನೀಡಿದರು.


"ಇದು ನಿಮ್ಮ ದೇಹದಲ್ಲಿ ಎಲ್ಲಿಗೆ ಹೋಗುತ್ತಿದೆ? ಅದನ್ನು ನಿವಾರಿಸಬಹುದೇ? ಹೊರಹಾಕಬಹುದೇ? ಅಥವಾ ಕೆಲವು ಅಂಗಗಳಲ್ಲಿ ಶೇಖರಣೆಯಾಗಿ ಉಳಿಯುತ್ತವೆಯೇ, ಅಥವಾ ರಕ್ತದ ಮೂಲಕ ಮಿದುಳನ್ನೂ ಪ್ರವೇಶಿಸುತ್ತದೆಯೇ?' ಎಂಬುದನ್ನು ಪತ್ತೆ ಮಾಡಬೇಕಿದೆ.


ಮೈಕ್ರೊಪ್ಲಾಸ್ಟಿಕ್‌ಗಳು ಗಾಳಿ, ನೀರು ಅಥವಾ ಆಹಾರದ ಮೂಲಕ ಅನೇಕ ಮಾರ್ಗಗಳಿಂದ ದೇಹವನ್ನು ಪ್ರವೇಶಿಸಬಹುದೆಂದು ಅಧ್ಯಯನವು ಹೇಳಿದೆ, ಆದರೆ ನಿರ್ದಿಷ್ಟ ಟೂತ್‌ಪೇಸ್ಟ್‌ಗಳು, ಲಿಪ್ ಗ್ಲೋಸ್‌ಗಳು ಮತ್ತು ಟ್ಯಾಟೂ ಶಾಯಿಯಂತಹ ಉತ್ಪನ್ನಗಳಲ್ಲಿಯೂ ಸಹ ಇಂತಹ ಮೈಕ್ರೋ ಪ್ಲಾಸ್ಟಿಕ್ ಅಂಶಗಳಿರುತ್ತವೆ.


"ಪ್ಲಾಸ್ಟಿಕ್ ಕಣಗಳು ರಕ್ತಪ್ರವಾಹದ ಮೂಲಕ ಅಂಗಗಳಿಗೂ ತಲುಪಬಹುದು ಎಂಬುದು ವೈಜ್ಞಾನಿಕವಾಗಿ ಋಜುವಾತಾಗಬೇಕಿದೆ" ಎಂದು ಅಧ್ಯಯನವು ಹೇಳಿದೆ.


ವೆಥಾಕ್ ಅವರು ತಮ್ಮ ಅಧ್ಯಯನಕ್ಕೆ ಬಳಸಿಕೊಳ್ಳದ ರಕ್ತದ ಮಾದರಿಗಳಲ್ಲೂ ಇತರ ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳು ಇರಬಹುದೆಂದು ಹೇಳಿದರು. ಉದಾಹರಣೆಗೆ, ಮಾದರಿಯನ್ನು ತೆಗೆದುಕೊಳ್ಳಲು ಬಳಸಿದ ಸೂಜಿಯ ವ್ಯಾಸಕ್ಕಿಂತ ದೊಡ್ಡದಾದ ಕಣಗಳನ್ನು ಈ ಅಧ್ಯಯನದಲ್ಲಿ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.


ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಯುಕೆ ಮೂಲದ ಗುಂಪು, ಆರೋಗ್ಯ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಸಾಮಾನ್ಯ ಸಮುದ್ರಗಳ ನೆದರ್ಲ್ಯಾಂಡ್ಸ್ ಸಂಸ್ಥೆಗಳು ಈ ಅಧ್ಯಯನಕ್ಕೆ ಧನಸಹಾಯ ನೀಡಿವೆ.


ಬ್ರಿಟನ್‌ನ ರಾಷ್ಟ್ರೀಯ ಸಮುದ್ರಶಾಸ್ತ್ರ ಕೇಂದ್ರದ ಮಾನವಜನ್ಯ ಮಾಲಿನ್ಯಕಾರಕಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿ ಆಲಿಸ್ ಹಾರ್ಟನ್, ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳಿವೆ ಎಂಬುದನ್ನು ಈ ಅಧ್ಯಯನವು  "ನಿಸ್ಸಂದೇಹವಾಗಿ" ಸಾಬೀತುಪಡಿಸಿದೆ ಎಂದು ಹೇಳಿದರು.


"ಪ್ಲಾಸ್ಟಿಕ್ ಕಣಗಳು ಕೇವಲ ಪರಿಸರದಲ್ಲೆಲ್ಲ ವ್ಯಾಪಿಸಿವೆ ಅಷ್ಟೇ ಅಲ್ಲ, ನಮ್ಮ ದೇಹದೊಳಗೂ ವ್ಯಾಪಿಸುತ್ತಿವೆ ಎಂಬುದಕ್ಕೆ ಈ ಅಧ್ಯಯನ ಪುರಾವೆಗಳಿಗೆ  ನೀಡುತ್ತದೆ" ಎಂದು ಅವರು ವಿಜ್ಞಾನ ಮಾಧ್ಯಮ ಕೇಂದ್ರಕ್ಕೆ ತಿಳಿಸಿದರು.


ಪೋರ್ಟ್ಸ್‌ಮೌತ್ ವಿಶ್ವವಿದ್ಯಾನಿಲಯದ ಜೈವಿಕ ರಸಾಯನಶಾಸ್ತ್ರ ಮತ್ತು ಪರಿಸರ ಮಾಲಿನ್ಯ ವಿಭಾಗದ ಪ್ರಾಧ್ಯಾಪಕ ಫೇ ಕೌಸಿರೊ, ಅಧ್ಯಯನಕ್ಕೆ ಬಳಸಿಕೊಂಡ ಮಾದರಿ ಸಣ್ಣ ಪ್ರಮಾಣದ್ದಾದರೂ ಅಧ್ಯಯನವು "ದೃಢವಾಗಿದೆ ಮತ್ತು ಪರಿಶೀಲನೆಗೆ ಸೂಕ್ತವಾಗಿದೆ" ಎಂದು ಅವರು ಹೇಳಿದರು. ಅವರು ಹೆಚ್ಚಿನ ಸಂಶೋಧನೆಗೆ ಕರೆ ನೀಡಿದರು.


"ದೇಹದ ಎಲ್ಲ ಅಂಗಗಳಿಗೂ ರಕ್ತ ಪರಿಚಲನೆ ಇದ್ದೇ ಇರುವುದರಿಂದ ಪ್ಲಾಸ್ಟಿಕ್ ಅಂಶಗಳು ಎಲ್ಲಾ ಅಂಗಗಳಲ್ಲೂ ವ್ಯಾಪಿಸಿರಬಹುದು" ಎಂದು ಅವರು ಕಳವಳ ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments