ಹಲ್ದಾನಿ (ಉ.ಪ್ರ): ಸೈಕಲ್ ಅಂಗಡಿ ಮಾಲೀಕನೊಬ್ಬ ರಾಷ್ಟ್ರಧ್ವಜದಿಂದ ಸೈಕಲ್ ಕ್ಲೀನ್ ಮಾಡುತ್ತಿರುವ ವೀಡಿಯೋ ಒಂದು ವೈರಲ್ ಆದ ನಂತರ ಉ.ಪ್ರ ಪೊಲೀಸರು ಆರೋಪಿಯನ್ನು ಕ್ಷಿಪ್ರವಾಗಿ ಬಂಧಿಸಿ ಸೆರಿಯಾದ ಪಾಠ ಕಲಿಸಿದ್ದಾರೆ.
ಈ ಘಟನೆಯನ್ನು ಹಲ್ದಾನಿಯ ಸ್ಥಳೀಯ ಪತ್ರಿಕೆ ಸಂವಾದ ನ್ಯೂಸ್ ಮೊದಲು ವರದಿ ಮಾಡಿತ್ತು.
ಹಲ್ದಾನಿಯ ಮಂಗಲ್‌ಪಹಾಡಿಯಲ್ಲಿರುವ ಸೈಕಲ್ ಅಂಗಡಿ ಮಾಲೀಕ ಶರೀಫ್ ಎಂಬಾತನೇ ಈ ರೀತಿ ತ್ರಿವರ್ಣ ಧ್ವಜದಿಂದ ಸೈಕಲ್ ಸ್ವಚ್ಛಗೊಳಿಸಿದವನು. ಈತನ ದುಷ್ಕೃತ್ಯವನ್ನು ಯಾರೋ ಒಬ್ಬರು ಸೆರೆ ಹಿಡಿದು ವೀಡಿಯೋವನ್ನು ವೈರಲ್ ಮಾಡಿದ್ದರು. ಈ ಘಟನೆ ಗಮನಕ್ಕೆ ಬಂದ ತಕ್ಷಣವೇ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದರು. ವಿಷಯ ತಿಳಿದ ಪೊಲೀಸರು ಅಂಗಡಿಯ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಬಂಭುಲ್ಪುರದ ಲೈನ್ ಸಂಖ್ಯೆ 116 ರ ನಿವಾಸಿ ಶರೀಫ್ ಅಹಮದ್. ಮಂಗಲ್ ಪಹಾಡಿಯಲ್ಲಿರುವ ಮಾರುಕಟ್ಟೆಯಲ್ಲಿ ಈತನ ಸೈಕಲ್ ಅಂಗಡಿ ಇದೆ. ಈತನ ಘನಂದಾರಿ ಕೆಲಸದ ವೀಡಿಯೊ ಗುರುವಾರದಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ವೈರಲ್ ಆದ ವಿಡಿಯೋದಲ್ಲಿ ಶರೀಫ್ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಾಮಾನ್ಯ ಹರಕಲು ಬಟ್ಟೆಯಲ್ಲಿ ಧೂಳು ಕೊಡಹುವಂತೆ ಸೈಕಲ್‌ಗಳಿಂದ ಧೂಳು ಕೊಡಹಿದ್ದ. ಅದೇ ವೇಳೆಗೆ ಧ್ವಜವು ಕೈಜಾರಿ ಕೆಳಗೆ ಬಿದ್ದಿರುವುದೂ ವೀಡಿಯೋದಲ್ಲಿ ಗೋಚರವಾಗುತ್ತದೆ. ಕೆಲವೇ ಸಮಯದಲ್ಲಿ ಈ ವಿಡಿಯೋ ನಗರದಾದ್ಯಂತ ಹರಡಿತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾನಿಷ್ಕ್ ಧಿಂಗ್ರಾ ಅವರು ವಿಡಿಯೋ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಇದಾದ ಬಳಿಕ ಕೊತ್ವಾಲ್ ಹರೇಂದ್ರ ಚೌಧರಿ ಅವರು ವಿಡಿಯೋ ಆಧರಿಸಿ ಆರೋಪಿ ಷರೀಫ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದರು. ಇದೀಗ ಆರೋಪಿ ಶರೀಫ್ ಕಂಬಿ ಎಣಿಸುತ್ತಿದ್ದಾನೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments