ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಮಿತಿಗಳ ರಚನೆ

Ad Code

ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಮಿತಿಗಳ ರಚನೆ


ಪಣಜಿ: ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಮತ್ತು ತಾಲೂಕಾ ಘಟಕ ಸಮೀತಿಗಳ ರಚನೆ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಗೋವಾ ಕನ್ನಡಿಗರು ಕನ್ನಡಮ್ಮನ ಸೇವೆಗೆ ಸದಾ ಸಿದ್ಧರಿದ್ದಾರೆ. ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.


ಪಣಜಿಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು- ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರು ಇಲ್ಲಿ ಕೇವಲ ಉದರ ನಿರ್ವಹಣೆಗೆ ಶ್ರಮಪಟ್ಟು ದುಡಿಯುವುದರೊಂದಿಗೆ ಹೊರ ನಾಡಲ್ಲಿ ಕನ್ನಡ ಉಳಿಸಿ ಬೆಳೆಸಲು ಸದಾ ಸಿದ್ಧರಿದ್ದಾರೆ. ಈಗಾಗಲೇ ಗೋವಾದಲ್ಲಿ 30 ಕ್ಕೂ ಹೆಚ್ಚು ಕನ್ನಡ ಸಂಘಗಳು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿವೆ. ಇದೀಗ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯ, ಜಿಲ್ಲಾ, ತಾಲೂಕಾ ಸಮಿತಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಮೂಲಕ ಗೋವಾದಲ್ಲಿ ಕನ್ನಡ ಬೆಳೆಸುವುದು ಮಾತ್ರವಲ್ಲದೆಯೇ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.


ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯ ಗೌರವಾಧ್ಯಕ್ಷ ನಾಗರಾಜ ಗೊಂದಕರ್, ಎಎನ್‍ಐ ವರದಿಗಾರ ಅನೀಲ ಸನದಿ, ಹನುಮಂತ ನಾಗಳೂರ್, ಬಸವಣ್ಣಿ ಹುಳಕುಂದ, ಹೇಮಂತ ಹೆಬ್ಬಾಳ, ಸಿಮರನ್ ನಾಗೇಶ್ ಬಂಡಿವಡ್ಡರ್, ಮಾರುತಿ ಹರಿಜನ್, ಮಾಂತೇಶ್ ಬಿಸಕುಪಿ, ನಾಗೇಶ್ ಬಂಡಿವಡ್ಡರ್, ಮಾರುತಿ ತಳವಾರ್  ಮತ್ತಿತರರು ಉಪಸ್ಥಿತರಿದ್ದರು. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments