ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಗೋವಾ ಘಟಕದ ಉದ್ಘಾಟನೆ

Ad Code

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಗೋವಾ ಘಟಕದ ಉದ್ಘಾಟನೆ


ಪಣಜಿ: ಧಾರವಾಡ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವನ್ನು ದೇಶಾದ್ಯಂತ ನಡೆಸುತ್ತ ಹೊರ ರಾಜ್ಯಗಳಲ್ಲಿಯೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡುತ್ತ ಹೋಗುತ್ತಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾಧ್ಯಕ್ಷ ಸಂಜೀವ ದುಮಕನಾಳ ಹೇಳಿದರು.


ವಾಸ್ಕೊದ ರವೀಂದ್ರ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಗೋವಾ ಘಟಕದ ಉಧ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಸಮಾರಂಭ ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.


ಮಕ್ಕಳ ಸಾಹಿತ್ಯ ಪರಿಷತ್ ಗೋವಾ ಘಟಕದ ಅಧ್ಯಕ್ಷ ದಿಲೀಪ ಭಜಂತ್ರಿ ಮಾತನಾಡಿ- ಮಕ್ಕಳ ಸಾಹಿತ್ಯ, ಶಿಕ್ಷಣ ಸಂಗೀತ, ಪರಿಸರ, ಸಂಸ್ಕøತಿ, ಸಂಸ್ಕಾರವನ್ನು ಬೆಳೆಸಿಕೊಂಡು ಹೋಗುವುದರ ಜೊತೆಗೆ ಮಕ್ಕಳಿಗೆ ಗುಣಾತ್ಮಕ ವಿಮರ್ಶೆಗಳನ್ನು ವಿಚಾರಗಳನ್ನು ನಡೆಸಲಾಗುವುದು ಎಂದರು.


ಮಕ್ಕಳ ಸಾಹಿತ್ಯ ಪರಿಷತ್ ಗೋವಾ ಘಟಕ ನೂತನ ಪದಾಧಿಕಾರಿಗಳನ್ನಾಗಿ ದಿಲೀಪ ಭಜಂತ್ರಿ-ಅಧ್ಯಕ್ಷರು, ಬಾಲಪ್ಪ ರಾಮೊಡಗಿ-ಉಪಾಧ್ಯಕ್ಷರು, ಕರಿಯಪ್ಪ.ಎಚ್. ಬೈನಾಪುರ-ಕಾರ್ಯದರ್ಶಿ, ಯಮನೂರಿ ಬಜ್ಜನವರ್ - ಸಹ ಕಾರ್ಯದರ್ಶಿ, ವೀರಭಧ್ರ ಪಾಂಚಾಳ-ಖಜಾಂಚಿ, ಶ್ರೀಕಾಂತ ಸೋಂಪುರ- ಜಂಟಿ ಖಜಾಂಚಿ ಅವರನ್ನು ನೂತನ ಪದಾಧಿಕಾರಿಗಳನ್ನಾಗಿ ಘೋಷಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ, ಮಿಸ್ ಇಂಡಿಯಾ ವಿಜೇತೆ ಪೂಜಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments