ಹೊಸದಿಲ್ಲಿ: ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ದೆಹಲಿ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಇದಾದ ನಂತರ ಮಲಿಕ್ ನನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು. ಶಿಕ್ಷೆಗೆ ಮುನ್ನವೇ ಮಲಿಕ್‌ನನ್ನು ತಿಹಾರ್‌ನಲ್ಲಿ ಇರಿಸಲಾಗಿತ್ತು. ಏತನ್ಮಧ್ಯೆ, ಬಿಗಿ ಭದ್ರತೆಯ ನಡುವೆ ಯಾಸಿನ್ ಮಲಿಕ್ ನನ್ನು ಇತರ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಹಾರ್ ಆಡಳಿತದಿಂದ ಗುರುವಾರ ತಿಳಿಸಿದೆ.
ಭದ್ರತೆ ದೃಷ್ಟಿಯಿಂದ ಮಲಿಕ್ ಗೆ ಜೈಲಿನಲ್ಲಿ ಯಾವುದೇ ಕೆಲಸ ನೀಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನನ್ನು ಜೈಲು ಕೊಠಡಿ ಸಂಖ್ಯೆ 7 ರಲ್ಲಿ ಇರಿಸಲಾಗಿದ್ದು, ತೀವ್ರ ನಿಗಾ ಇರಿಸಲಾಗಿದೆ. ಭಯೋತ್ಪಾದನೆಗೆ ಹಣ ನೀಡಿದ ಆರೋಪದಲ್ಲಿ ಮಲಿಕ್ ಯಾವುದೇ ಪೆರೋಲ್ ಗೆ ಅರ್ಹನಾಗಿರುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಯಾಸಿನ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಬುಧವಾರದಂದು ನ್ಯಾಯಾಲಯವು ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಆತನಿಗೆ ಮರಣದಂಡನೆ ವಿಧಿಸಬೇಕೆಂಬ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪಟಿಯಾಲಾ ಹೌಸ್‌ನಲ್ಲಿ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ತುಂಬಿದ ನ್ಯಾಯಾಲಯದಲ್ಲಿ ಸಂಜೆ 6 ರ ನಂತರ ನೀಡಿದ ತೀರ್ಪಿನಲ್ಲಿ ಯಾಸಿನ್‌ಗೆ ಎರಡು ಸೆಕ್ಷನ್‌ಗಳಲ್ಲಿ ಜೀವಾವಧಿ ಶಿಕ್ಷೆ, ಒಂದರಲ್ಲಿ 10 ವರ್ಷ ಮತ್ತು ಒಂದರಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರಕಾರ, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಅಪರಾಧಿ ಸ್ವತಃ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನಿಗೆ ಮರಣದಂಡನೆ ವಿಧಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments