ಗೋವಾ: ಪ್ರವಾಸಿಗರಿಗೆ ಅಕ್ರಮವಾಗಿ ಖಾಸಗಿ ಬೈಕ್‌ಗಳನ್ನು ನೀಡಿದರೆ ಜಪ್ತಿ: ಸಿಎಂ ಪ್ರಮೋದ್ ಸಾವಂತ್‌ ಎಚ್ಚರಿಕೆ

Ad Code

ಗೋವಾ: ಪ್ರವಾಸಿಗರಿಗೆ ಅಕ್ರಮವಾಗಿ ಖಾಸಗಿ ಬೈಕ್‌ಗಳನ್ನು ನೀಡಿದರೆ ಜಪ್ತಿ: ಸಿಎಂ ಪ್ರಮೋದ್ ಸಾವಂತ್‌ ಎಚ್ಚರಿಕೆ



ಪಣಜಿ: ರಾಜ್ಯದಲ್ಲಿ ರೆಂಟ್ ಎ ಬೈಕ್ ಹೆಸರಿನಲ್ಲಿ ಪ್ರವಾಸಿಗರಿಗೆ ಖಾಸಗಿ ಬೈಕ್ ಗಳನ್ನು ಅಕ್ರಮವಾಗಿ ಬಾಡಿಗೆಗೆ ನೀಡುತ್ತಿರುವುದು ಹೆಚ್ಚಾಗಿದೆ. ಅಂತಹ ವಾಹನಗಳು ಕಂಡು ಬಂದರೆ ಜಪ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಎಚ್ಚರಿಕೆ ನೀಡಿದ್ದಾರೆ.


ಸಚಿವ ಸಂಪುಟ ಸಭೆಯ ಬಳಿಕ ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು- ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಡೆಯಲು ಸರ್ಕಾರ ಶುಕ್ರವಾರ ಸಾರ್ವಜನಿಕ ವಿಚಾರಣೆ ನಡೆಸುತ್ತಿದೆ. ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪಡೆಯಲಾಗುತ್ತಿದೆ. ಪಣಜಿಯ ಅಟಲ್ ಸೇತುದಲ್ಲಿ ದ್ವಿಚಕ್ರ ವಾಹನಗಳ ಓಡಾಟ ನಿಷೇಧಿಸಿದ್ದರೂ ಕೂಡ ಕೆಲವು ಪ್ರವಾಸಿಗರು ಖಾಸಗಿ ಸಂಖ್ಯೆಯ ದ್ವಿಚಕ್ರ ವಾಹನಗಳೊಂದಿಗೆ ಈ ಮಾರ್ಗವಾಗಿ ಓಡಾಡುತ್ತಿದ್ದಾರೆ. ಇದನ್ನು ನಾವು ಗಮನಿಸಿದ್ದೇವೆ, ಗೋವಾದ ಯಾರೂ ಕೂಡ ಅಟಲ್ ಸೇತುವೆಯ ಮೇಲೆ ಬೈಕ್ ಸವಾರಿ ನಡೆಸುವುದಿಲ್ಲ. ಇದರಿಂದ ಈ ವಾಹನಗಳನ್ನು ಪ್ರವಾಸಿಗರಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿರುವುದು ಸ್ಪಷ್ಟವಾಗಿದೆ. ಸೇತುವೆ ಮೇಲೆ ಓಡಾಡುವ ಬೈಕ್ ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಾವಿನ್ ಗುದಿನ್ಹೊ ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments