ಮತ್ತೆ ಮಾತಿನ ಚಾಟಿ ಬೀಸಿ, ನಿಜಾಂಶ ತಿಳಿದುಕೊಳ್ಳಿ ಎಂದು ಸಲಹೆ ನೀಡಿದ ನಟಿ ಕಂಗನಾ

Ad Code

ಮತ್ತೆ ಮಾತಿನ ಚಾಟಿ ಬೀಸಿ, ನಿಜಾಂಶ ತಿಳಿದುಕೊಳ್ಳಿ ಎಂದು ಸಲಹೆ ನೀಡಿದ ನಟಿ ಕಂಗನಾ


ನವದೆಹಲಿ: 1947ರಲ್ಲಿ ನಮಗೆ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯವಲ್ಲ. ಅದು ಕೇವಲ ಭಿಕ್ಷೆ. ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಹೇಳಿ ಕೆಲವರ ಕೆಂಗಣ್ಣಿಗೆ ನಟಿ ಕಂಗನಾ ರಣಾವತ್‌ ಗುರಿಯಾಗಿದ್ದಾರೆ. ಈಗ ಮತ್ತು ತಮ್ಮ ಮಾತಿನ ಚಾಟಿಯನ್ನು ಕಂಗನಾ ಮತ್ತೆ ಮುಂದುರೆಸಿದ್ದಾರೆ.


ನಿಜವಾಗಿಯೂ ಸ್ವಾತಂತ್ರ್ಯ ತಂದುಕೊಟ್ಟವರು ಹುತಾತ್ಮರಾದರು. ಬ್ರಿಟಿಷರ ವಿರುದ್ಧ ಸೆಣಸಾಡಿದವರನ್ನು ಕೊಲೆ ಮಾಡಿದ, ಭಾರತಕ್ಕೆ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ನಾಯಕರು ಹಾಗೂ ಲಕ್ಷಾಂತರ ಜನರನ್ನು ಕೊಂದವರ ಸಾವಿಗೆ ಕಾರಣ ಆಗಿರುವ ಬ್ರಿಟಿಷರ ವಿರುದ್ಧ ಯಾವುದೇ ಕೇಸ್‌ ದಾಖಲು ಮಾಡಲಿಲ್ಲ. ಪ್ರಕರಣ ದಾಖಲಿಸುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ ಅವರನ್ನು ಆಗ ಯಾಕೆ ಸುಮ್ಮನೆ ಬಿಡಲಾಯಿತು ಎಂಬ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿರುವಿರಾ ಎಂಬುದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಕಂಗನಾ ಇದೀಗ ಮತ್ತೊಂದು ಹೇಳಿಕೆ ನೀಡಿ ಮಾತಿನ ಸಮರವನ್ನು ಮುಂದುವರೆಸಿದ್ದಾರೆ.


'ತಾನು ಈಗಲೂ ಹೇಳುತ್ತಿದ್ದೇನೆ. 1947ರಲ್ಲಿ ಭಾರತೀಯರಿಗೆ ಸಿಕ್ಕಿದ್ದು ಭಿಕ್ಷೆಯೇ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡುತ್ತಿರುವುದು ನಾನಲ್ಲ. ನಿಜವಾಗಿ ಹೋರಾಡಿದವರು ಬಲಿಯಾದರು. ಭಗತ್‌ ಸಿಂಗ್‌ ಅಥವಾ ಸುಭಾಷ್‌ ಚಂದ್ರ ಬೋಸ್‌ರಂಥ ನಿಜವಾದ ನಾಯಕರು ಪ್ರಾಣವನ್ನು ಸಮರ್ಪಿಸಿದರು. ಆದರೆ ಮತ್ಯಾರೋ ಅದರ ಕ್ರೆಡಿಟ್‌ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಕಂಗನಾ ಆರೋಪ ಮಾಡಿದ್ದಾರೆ.


ಜೊತೆಗೆ ಗಾಂಧೀಜಿಯವರ ಅಹಿಂಸಾ ಹಾದಿಯ ಪ್ರಸಿದ್ಧ ನುಡಿಯಾಗಿರುವ 'ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ' ಎನ್ನುವ ಮಾತನ್ನು ನಟಿ ಕಂಗನಾ ಪ್ರಸ್ತಾಪಿಸಿದ್ದಾರೆ. 'ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಬರೀ ಭಿಕ್ಷೆ' ಎಂದು ಪೋಸ್ಟ್‌ ಮಾಡಿದ್ದಾರೆ.


'ನೇತಾಜಿ ಅವರನ್ನು ಹಸ್ತಾಂತರಿಸಲು ಗಾಂಧಿ ಮತ್ತು ಇತರರ ಸಮ್ಮತಿ' ಎಂದು ಶೀರ್ಷಿಕೆ ಇರುವ 1940ರಲ್ಲಿ ಪ್ರಕಟಗೊಂಡಿದ್ದ ಲೇಖನವನ್ನು ಕಂಗನಾ ಶೇರ್ ಮಾಡಿದ್ದಾರೆ. ಈ ಕುರಿತು ಬರೆದಿರುವ ಕಂಗನಾ, ನೀವು ಗಾಂಧಿ ಹಾಗೂ ನೇತಾಜಿಯನ್ನು ಒಟ್ಟಿಗೆ ಅಭಿನಂದಿಸಬೇಡಿ. ಇವರ ಇಬ್ಬರ ಹೋಲಿಕೆಯೂ ಬೇಡ. ಯಾರು ಉತ್ತಮರು ಎಂಬುದನ್ನು ನೀವೇ ತೀರ್ಮಾನಿಸಿ. ಆರಿಸಿಕೊಳ್ಳುವ ಅಧಿಕಾರ ನಿಮ್ಮದು.


ವಿರೋಧಿಗಳನ್ನು ಎದುರಿಸಲಾಗದ ಕುತಂತ್ರಿಗಳು, ಬ್ರಿಟಿಷರ ಜೊತೆಗೆ ಹೋರಾಡಲು ಬಿಸಿರಕ್ತವಿಲ್ಲದ, ಆದರೂ ಅಧಿಕಾರದ ದಾಹ ಇದ್ದವರು ನಿಜವಾದ ಸ್ವಾತಂತ್ರಕ್ಕಾಗಿ ಹೋರಾಡಿದವರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದರು ಎಂಬ ವಿಚಾರವನ್ನು ಪತ್ರಿಕೆಯ ಈ ವರದಿಯು ಸ್ಪಷ್ಟಪಡಿಸುತ್ತದೆ. ಗಾಂಧಿಯು ಎಂದಿಗೂ ನೈಜ ಹೋರಾಟಗಾರರಾಗಿರುವ ಭಗತ್‌ ಸಿಂಗ್‌ ಅಥವಾ ಸುಭಾಷ್‌ ಚಂದ್ರ ಬೋಸ್‌ ಅವರಿಗೆ ಬೆಂಬಲವನ್ನು ಕೊಡಲಿಲ್ಲ. 


ಈಗಲಾದರೂ ಯೋಚನೆ ಮಾಡಿ ನಿಜವನ್ನು ತಿಳಿದುಕೊಳ್ಳಿ ಎಂದಿದ್ದಾರೆ ಕಂಗನಾ. ಒಂದು ಕೆನ್ನೆಗೆ ಹೊಡೆದರೆ ಇತ್ತೊಂದು ಕೆನ್ನೆಯನ್ನು ತೋರಿಸು ಎಂಬ ಗಾಂಧಿ ಮಾರ್ಗವನ್ನು ಅನುಸರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದು ಕಂಗನಾ ಹೇಳಿದ್ದಾರೆ. ಈ ಹೇಳಿಕೆಯಿಂದ ಅನೇಕರು ಆಕ್ರೋಶಗೊಂಡಿದ್ದಾರೆ. ಸದ್ಯ ಇವರ ಈ ಹೇಳಿಕೆಯು ಸಾಮಾಜಿಕ ಜಾಲಾತಾಣಗಳಲ್ಲಿ ಚರ್ಚೆಯನ್ನು ಹುಟ್ಟಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments