2022 ಟಿ20 ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ನಡೆಯುವ ಮೈದಾನಗಳ ಮಾಹಿತಿ ನೀಡಿದ ಐಸಿಸಿ

Ad Code

2022 ಟಿ20 ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ನಡೆಯುವ ಮೈದಾನಗಳ ಮಾಹಿತಿ ನೀಡಿದ ಐಸಿಸಿ


ದುಬೈ:
2021ರ ಟಿ20 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಮುಂದಿನ ಟಿ20 ವಿಶ್ವಕಪ್ ಗೆ ಸಿದ್ಧತೆಗಳನ್ನು ನಡೆಸಿದೆ. ಮುಂದಿನ ಚುಟುಕು ವಿಶ್ವಕಪ್ 2022ರಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ನಡೆಯಲಿದೆ.


ಈ ಪಂದ್ಯಾವಳಿಯು 2022ರ ಅಕ್ಟೋಬರ್ 16 ರಿಂದ ಆರಂಭವಾಗಿ ನವೆಂಬರ್ 13ರ ತನಕ ಆಸ್ಟ್ರೇಲಿಯಾದ ಏಳು ನಗರಗಳಲ್ಲಿ ನಡೆಯಲಿದೆ.


ಸಿಡ್ನಿ ಕ್ರಿಕೆಟ್ ಗ್ರೌಂಡ್ ಮತ್ತು ಅಡಿಲೇಡ್ ಓವಲ್ ನಲ್ಲಿ ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಮತ್ತು 10ರಂದು ನಡೆಯಲಿವೆ. ನವೆಂಬರ್ 13ರಂದು ಫೈನಲ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಹೋಬರ್ಟ್, ಬ್ರಿಸ್ಬೇನ್, ಪರ್ತ್, ಮತ್ತು ಗೀಲಾಂಗ್ ನಗರಗಳಲ್ಲಿ ಬೇರೆ ಪಂದ್ಯಗಳು ನಡೆಯಲಿದೆ.


ಮುಂದಿನ ಟಿ20 ವಿಶ್ವಕಪ್ ಗೆ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ದೇಶಗಳು ಈಗಾಗಲೇ ಟೂರ್ನಿಯ ಸೂಪರ್ 12 ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿವೆ. ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಆರಂಭಿಕ ಸುತ್ತಿನಲ್ಲಿ ಆಡಲಿವೆ. ಮುಂದಿನ ವರ್ಷ ಜಿಂಬಾಬ್ವೆ ಮತ್ತು ಓಮನ್ ನಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಾವಳಿಗಳಲ್ಲಿ ಇತರ ನಾಲ್ಕು ತಂಡಗಳನ್ನು ತೀರ್ಮಾನಿಸಲಾಗುತ್ತದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments