5,000 ಅಡಿ ಎತ್ತರದಲ್ಲಿ ಲ್ಯಾಂಡಿಂಗ್‌ ಹಾಗೂ ಟೇಕಾಫ್ ಆಗಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಹಸ್ತಾಂತರ

Ad Code

5,000 ಅಡಿ ಎತ್ತರದಲ್ಲಿ ಲ್ಯಾಂಡಿಂಗ್‌ ಹಾಗೂ ಟೇಕಾಫ್ ಆಗಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಹಸ್ತಾಂತರ


ಹೊಸದಿಲ್ಲಿ: ಬೆಂಗಳೂರಿನ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ನಿರ್ಮಿಸಿರುವ ಹೆಲಿಕಾಪ್ಟರ್‌ ಹಾಗೂ ಡ್ರೋನ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸೇನೆಗೆ ಹಸ್ತಾಂತರ ಮಾಡಲಿದ್ದಾರೆ.


ಸಮುದ್ರ ಮಟ್ಟದಿಂದ 5,000 ಅಡಿ ಎತ್ತರದಲ್ಲಿ ಲ್ಯಾಂಡಿಂಗ್‌ ಹಾಗೂ ಟೇಕಾಫ್ ಆಗಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ಹೆಲಿಕಾಪ್ಟರ್‌ಗಳು ಎಂಬ ಹೆಗ್ಗಳಿಕೆಗೆ ಇವು ಪಾತ್ರವಾಗಿದೆ.


ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಿನ್ನೆ ಎಂದರೆ ಬುಧವಾರದಿಂದ ಆರಂಭವಾಗಿರುವ ಮೂರು ದಿನಗಳ “ರಾಷ್ಟ್ರ ರಕ್ಷೆಯ ಸಮರ್ಪಣೆಯ ಪರ್ವ’ದ ಅಂತಿಮ ದಿನದಂದು ದೇಶಿಯವಾಗಿ ನಿರ್ಮಾಣಗೊಂಡ ಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥರಿಗೆ ಪ್ರಧಾನಿ ಮೋದಿಯವರು ಹಸ್ತಾಂತರಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿಯು ಮಾಹಿತಿ ನೀಡಿದೆ.


ದೇಶಿಯ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟ ಡ್ರೋನ್‌ ಹಾಗೂ ಮಾನವ ರಹಿತ ಯುದ್ಧ ವಿಮಾನಗಳನ್ನು ಭೂಸೇನೆಯ ಮುಖ್ಯಸ್ಥರಿಗೆ, ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿದ ಅಡ್ವಾನ್ಸ್‌ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸೂಟ್‌ಗಳನ್ನು ನೌಕಾಪಡೆ ಮುಖ್ಯಸ್ಥರಿಗೆ ಹಸ್ತಾಂತರ ಮಾಡಲಿಗುವುದು. ಇದರೊಂದಿಗೆ ಉತ್ತರ ಪ್ರದೇಶ ರಕ್ಷಣ ಉದ್ಯಮ ಕಾರಿಡಾರ್‌ ವ್ಯಾಪ್ತಿಯಲ್ಲಿ 400 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.


ರಾಷ್ಟ್ರ ರಕ್ಷೆಯ ಸಮರ್ಪಣೆಯ ಪರ್ವವನ್ನು ಬುಧವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಉದ್ಘಾಟನೆ ಮಾಡಿದ್ದಾರೆ.


ಸೇನೆಯ ಸರಕು ಸಾಗಣಾ ಶಕ್ತಿಯ ಪ್ರದರ್ಶನ


ಚೀನ- ಭಾರತ ಗಡಿ ಪ್ರದೇಶದ ಲಡಾಕ್‌ನಲ್ಲಿ ಭಾರತೀಯ ಸೇನೆಯು ತನ್ನ ಸರಕು ಸಾಗಣೆಯ ಶಕ್ತಿಯನ್ನು ಪ್ರದರ್ಶಿಸಿದೆ. ಭಾರತೀಯ ಸೇನೆ ಮತ್ತು ವಾಯುಪಡೆಗಳು ಜೊತೆಗೂಡಿ ಈ ಪ್ರದರ್ಶನವನ್ನು ನ.15ರಂದು ನಡೆಸಿದ್ದಾಗಿ ರಕ್ಷಣಾ ಸಚಿವಾಲಯವು ತಿಳಿಸಿದೆ. ಸ್ಟಾಂಡ್‌ ಆಫ್ ಡ್ರಾಪ್‌, ಇಂಟರ್‌ ಥಿಯೇಟರ್‌ ಮೂವ್‌ಮೆಂಟ್‌  ಸೇರಿದಂತೆ ಅನೇಕ ರೀತಿಯ ಪ್ರದರ್ಶನವನ್ನು ನಡೆಸಲಾಗಿದೆ. ಇತ್ತೀಚೆಗಷ್ಟೇ ಆ ಪ್ರದೇಶದಲ್ಲಿ ವಾಯುಪಡೆಯ ಶಕ್ತಿ ಪ್ರದರ್ಶನವನ್ನು ಕೂಡಾ ಏರ್ಪಡಿಸಲಾಗಿತ್ತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments