ಹೈದರಾಬಾದ್: ಬಣ್ಣದ ಲೋಕಕ್ಕೆ ಟಾಲಿವುಡ್‌ನ 'ಶಾಕುಂತಲಂ' ಸಿನಿಮಾ ಮುಖಾಂತರ ಎಂಟ್ರಿ ಕೊಟ್ಟಿರುವ ನಟ ಅಲ್ಲು ಅರ್ಜುನ್ ಮಗಳಾದ ಐದು ವರ್ಷದ ಪುಟಾಣಿ ಅರ್ಹಾ ಅರ್ಜುನ್, ಚೆಸ್ ಆಡುವ ಮೂಲಕ ನೊಬೆಲ್ ವಿಶ್ವ ದಾಖಲೆ ಮಾಡಿದ್ದಾಳೆ.
ನಟನೆಯಲ್ಲಿಯೂ ಸೈ ಎನಿಸಿಕೊಂಡಿರುವ ಈಕೆ ಅತಿ ಚಿಕ್ಕ ವಯಸ್ಸಿಗೆ ಚೆಸ್ ಟ್ರೇನರ್ ಆಗಿದ್ದಾಳೆ .ಅಲ್ಲು ಅರ್ಜುನ್ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಶುಭವನ್ನು ಹಾರೈಸಿರುವ ಅವರು, ತಮ್ಮ ಪುತ್ರಿಯ ಸಾಧನೆಯ ಬಗ್ಗೆ ಬರೆದುಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಆಕೆ ಚೆಸ್ ಆಡುತ್ತಿರುವುದನ್ನು ಹಾಗೂ ಅರ್ಹಾಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ಪುರಸ್ಕಾರ ನೀಡಿ ಗೌರವಿಸುವುದನ್ನು ನೋಡಬಹುದು. ಈ ಪುಟ್ಟ ಹುಡುಗಿಯ ದೊಡ್ಡ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments