ಡಿಸೆಂಬರ್‌ನಲ್ಲಿ ಕೋವಿಡ್ 19 ಮತ್ತೆ ಸಂಭವ: ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ

Ad Code

ಡಿಸೆಂಬರ್‌ನಲ್ಲಿ ಕೋವಿಡ್ 19 ಮತ್ತೆ ಸಂಭವ: ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ



ಮುಂಬಯಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 766 ಕೊರೋನಾ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು 19 ಜನ ಇದರಿಂದ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 10000ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 


"ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗದವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಕೇಂದ್ರ ಸರ್ಕಾರದ ಅನುಮತಿಯನ್ಬು ಕೋರಿ ಹಾಗೂ 12-18 ವರ್ಷ ವಯಸ್ಸಿನ ಮಕ್ಕಳಿಗೆ ಕಳೆದ ವಾರ ಕೇಂದ್ರ ಲಸಿಕೆ ನೀಡುವುದರ ಕುರಿತು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿ ಅದರ ಬಗ್ಗೆ ಚರ್ಚೆ ನಡೆಸಿದೆ. ಭಾರತದಲ್ಲಿ ಅರ್ಧ ಪ್ರತಿಶತದಷ್ಟು ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ" ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದರು.  


ಅಷ್ಟೇ ಅಲ್ಲದೆ ಕೊರೋನಾ ಮೂರನೆ ಅಲೆಗೆ ಸಂಬಂಧಿಸಿ ಮಾತಾಡಿದ ಅವರು ಕೋವಾಕ್ಸಿನ್ ಕೊರೋನಾ  ರೋಗದ ಲಕ್ಷಣದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ಪ್ರಪಂಚದ ಮೊದಲ ಅಧ್ಯಯನ ಹೇಳುತ್ತದೆ. ಇದರ ಮೂರನೇ ಅಲೆಯ ಸಾಧ್ಯತೆಯನ್ನು ನಾವು ಡಿಸೆಂಬರ್ ನಲ್ಲಿ ನಿರೀಕ್ಷಿಸಬಹುದಾಗಿದೆ. ಆದರೆ ಅದರಿಂದ ದೊಡ್ಡ ಮಟ್ಟದ ಸಮಸ್ಯೆ ಸೃಷ್ಟಿಯಾಗದು" ಎಂದು ಹೇಳಿದರು.


ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಅವರು ಕೊರೋನಾ ಮೂರನೆ ಅಲೆ ಪ್ರಾರಂಭವಾದಲ್ಲಿ ವೈದ್ಯಕೀಯ ಚಿಕಿತ್ಸೆ, ಆಮ್ಲಜನಕ ಹಾಗೂ ಐಸಿಯು ಹಾಸಿಗೆಗಳ ಅಗತ್ಯವಿರುವುದಿಲ್ಲ ಹಾಗೂ ಮಹಾರಾಷ್ಟ್ರದಲ್ಲಿ ಶೇಕಡ 80 ರಷ್ಟು ನಾಗರಿಕರು ಲಸಿಕೆಯನ್ನು ಪಡೆದಿರುವುದರಿಂದ ಸೋಂಕಿನ ಮಟ್ಟ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ" ಎಂದು ಹೇಳಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments