ಮಹಾಮಳೆ: ತಿರುಪತಿಯ ಎಲ್ಲ ಮಾರ್ಗಗಳೂ ಬಂದ್‌, ಭಕ್ತರಿಗೆ ತೀವ್ರ ಸಂಕಷ್ಟ

Ad Code

ಮಹಾಮಳೆ: ತಿರುಪತಿಯ ಎಲ್ಲ ಮಾರ್ಗಗಳೂ ಬಂದ್‌, ಭಕ್ತರಿಗೆ ತೀವ್ರ ಸಂಕಷ್ಟ


ತಿರುಪತಿ: ಇತ್ತೀಚೆಗೆ ಸುರಿದ ಭೀಕರ ಮಳೆಯಿಂದಾಗಿ ಹಲವು ಮಾರ್ಗಗಳಿಂದ ತಿರುಪತಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಹಾಗೂ ರಸ್ತೆಗಳು ಹಾಳಾಗಿರುವುದರಿಂದ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವವರಿಗೆ ತೀವ್ರ ತೊಂದರೆ ಉಂಟಾಗಿದೆ‌.


ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಿಂದ ತಿರುಪತಿಗೆ ಹೋಗುವ ಎಲ್ಲಾ ದಾರಿಗಳು ಬಂದ್‌ ಆಗಿವೆ. ಇನ್ನೊಂದೆಡೆ, ತಿರುಪತಿಯನ್ನು ಸಂಪರ್ಕಿಸುವ ರೈಲು ಸಂಚಾರವನ್ನೂ ಕೂಡಾ ಸ್ಥಗಿತಗೊಳಿಸಲಾಗಿದೆ. ಇದರಿಂದ ತಿರುಪತಿಗೆ ಹೋಗುವ ಸಂಪರ್ಕವೇ ಕಡಿದು ಹೋದಂತಾಗಿದೆ.


ಭಾರೀ ಮಳೆಯಿಂದ ತಿರುಮಲದಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಸುತ್ತಲೂ ತುಂಬಿಕೊಂಡಿರುವ ಮಳೆಯ ನೀರನ್ನು ಬೇರೆಡೆಗೆ ಪಂಪ್‌ಔಟ್‌ ಮಾಡಲು ಹಲವಾರು ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಇದರ ಜೊತೆಗೆ ತಿರುಪತಿ ಬಳಿಯ ರಾಯುಲು ಚೆರುವು ಜಲಾಶಯವು ನೀರಿನ ಅಧಿಕ ಒತ್ತಡದ ಕಾರಣದಿಂದಾಗಿ ಒಡೆಯುವ ಸ್ಥಿತಿಗೆ ಬಂದಿದೆ. ಅಣೆಕಟ್ಟಿನಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಈ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚಿತ್ತೂರು ಜಿಲ್ಲಾಡಳಿತವು. ಒಟ್ಟು 18 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ.


ಟಿಕೆಟ್‌ ಪಡೆದಿದ್ದ ಎಲ್ಲ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ: ಟಿಟಿಡಿ

ನ. 18ರಿಂದ ನ.30ರ ತನಕದ ಅವಧಿಯಲ್ಲಿ ತಿರುಮಲದ ಶ್ರೀ ವೆಂಕಟೇಶ್ವರ ದೇವರ ಸನ್ನಿಧಾನಕ್ಕೆ ಭೇಟಿ ನೀಡಲು ಟಿಕೆಟ್‌ ಪಡೆದುಕೊಂಡಿದ್ದ ಎಲ್ಲ ಭಕ್ತರಿಗೂ ಬೇರೆ ನಿರ್ದಿಷ್ಟ ದಿನಗಳಲ್ಲಿ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಶ್ರೀ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಭರವಸೆ ನೀಡಿದೆ. ದರ್ಶನ ಪಡೆಯದ ಭಕ್ತರಿಗಾಗಿ ಪ್ರತ್ಯೇಕ ಸಾಫ್ಟ್ ವೇರ್‌ ರೂಪಿಸಲಾಗುತ್ತದೆ. ಅದನ್ನು ಬಳಸುವ ಮುಖಾಂತರ ಭಕ್ತರು ಬೇರೆ ದಿನದಂದು ದೇವರ ದರ್ಶನಕ್ಕೆ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ಟಿಟಿಡಿ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments