ಹೊಸದಿಲ್ಲಿ: ದೇಶ ತಂತ್ರಜ್ಞಾನದಲ್ಲಿ ತೀವ್ರವಾದ ಬದಲಾವಣೆಯನ್ನು ತರುತ್ತಿದೆ. ಇದರ ಜೊತೆಗೆ ಇನ್ನೆರಡು ವರ್ಷದಲ್ಲಿ ದೇಶ 6ಜಿ ಸೇವೆಯನ್ನು ಕೂಡ ಪ್ರಾರಂಭ ಮಾಡಲಿದೆ ಎಂದು ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
"ಭಾರತ ಈಗಾಗಲೇ ಆಧುನಿಕತೆಯತ್ತ ದಾಪುಗಾಲು ಇಡುತ್ತಿದ್ದರೂ 5ಜಿ ಸೇವೆಯನ್ನೇ ಸರಿಯಾಗಿ ಪ್ರಾರಂಭಿಸಿಲ್ಲ. ಈ ನಡುವೆ ಕೇಂದ್ರ ಸರ್ಕಾರದ 6ಜಿ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಹೊಸ ಪರಿಕಲ್ಪನೆಯನ್ನು ಸೃಷ್ಠಿಸಿದೆ. 2023- 2024ರ ನಡುವೆ ನಾವು ಆ ಸೇವೆಯನ್ನೂ ನಿರೀಕ್ಷಿಸಬಹುದಾಗಿದೆ" ಎಂದು ಅವರು ಹೇಳಿದರು.
ದೆಹಲಿಯಲ್ಲಿ ಮಾತನಾಡಿದ ಅವರು "ಇದು ಮೊಬೈಲ್ ಯುಗ. ಪ್ರತಿ ದಿನವೂ ಹೊಸ ಆವಿಷ್ಕಾರಗಳು ಹುಟ್ಟುತ್ತಲೇ ಇರುತ್ತದೆ. ಈ ಯಶಸ್ವಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಂಜಿನಿಯರ್ ಹಾಗೂ ವಿಜ್ಞಾನಿಗಳಿಗೆ ಅಗತ್ಯ ಅನುಮತಿಯನ್ನು ನೀಡಲಾಗಿದೆ. ಭಾರತದಲ್ಲಿ ನಾವು ಟೆಲಿಕಾಂ ಸಾಫ್ಟ್‌ವೇರ್ ನ್ನು ಕೂಡ ಅಭಿವೃದ್ಧಿ ಮಾಡುತ್ತಿದ್ದೇವೆ. ದೇಶದಲ್ಲಿ ಈಗಾಗಲೇ 5ಜಿ ಪ್ರಯೋಗಗಳಿಗಾಗಿ ಸ್ಪೆಕ್ಟ್ರಮ್ ನೀಡಲಾಗಿದೆ" ಎಂದು ಹೇಳಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments