ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ

Ad Code

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ

 


ಜೇವರ್: ಉತ್ತರಪ್ರದೇಶ ರಾಜ್ಯದ ಜೇವರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ನಂತರ ಮಾತನಾಡಿದ ಪ್ರಧಾನಿ ಮೋದಿಯವರು ಭಾರತವು ಅಭಿವೃದ್ಧಿಯಲ್ಲಿ ಹಿಂದೆ ಸರಿಯದು. ಸ್ವಾತಂತ್ರ್ಯ ದೊರೆತ ನಂತರ ಬಡತನ, ಮೋಸ-ವಂಚನೆ, ಹದಗೆಟ್ಟ ರಸ್ತೆಗಳು ಹಾಗೂ ಮಾಫಿಯಾ ಮುಂತಾದವುಗಳ ಅಟ್ಟಹಾಸದಿಂದ ಉತ್ತರಪ್ರದೇಶವು ಗುರುತಿಸಿಕೊಳ್ಳುತ್ತಿತ್ತು.


ಅನೇಕ ಹಗರಣ ಹಾಗೂ ಮಾಫಿಯಾಗಳಿಂದ ತೀವ್ರ ಅಪಹಾಸ್ಯಕ್ಕೆ ಒಳಗಾಗುತ್ತಿದ್ದ ಯುಪಿ ಪ್ರಸ್ತುತ, ಪ್ರಗತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ರೀತಿಯಲ್ಲಿ ಬೆಳೆದಿದೆ. ಇಲ್ಲಿ ತಲೆ ಎತ್ತಲಿರುವ ನೋಯ್ಡಾ ವಿಮಾನ ನಿಲ್ದಾಣವು ಪ್ರಗತಿಯ ಕೊಂಡಿಯಾಗಿದ್ದು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಯುಪಿಯನ್ನು ನೇರವಾಗಿ ಸಂಪರ್ಕಿಸಲು ಸಹಕಾರಿ ಎಂದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments