ತಿರುವಂಚೂರು: ಕೊಟ್ಟಾಯಂ ಜಿಲ್ಲೆಯ ರ್ಯಕುನ್ನಂ ಪಂಚಾಯತ್ನಲ್ಲಿ ನಡೆಸಿದ ಸಾಕ್ಷರತಾ ಪರೀಕ್ಷೆಯಲ್ಲಿ ಕುಟ್ಟಿಯಮ್ಮ ಉತ್ತಮ ಅಂಕಗಳನ್ನು ಗಳಿಸಿ ಸ್ಥಳೀಯ ತಾರೆಯಾಗಿ ಹೊರಹೊಮ್ಮಿದ್ದಾರೆ. 104 ವರ್ಷದ ವೃದ್ಧೆ 100ಕ್ಕೆ 84 ಅಂಕಗಳನ್ನು ಪಡೆದಿದ್ದಾರೆ.
ಇವರು ಶಾಲೆಯಲ್ಲಿ ಓದಿಲ್ಲವಾದರೂ ಕುಟ್ಟಿಯಮ್ಮ ಓದಬಲ್ಲರು. ಆದರೆ ಬರೆಯಲು ಗೊತ್ತಿರಲಿಲ್ಲ. ಸಾಕ್ಷರತಾ ಪ್ರೇರಕ್ ರೆಹನಾ ಅವರಿಗೆ ಬರೆಯುವುದು ಹೇಗೆಂದು ಹೇಳಿಕೊಟ್ಟರು. ಬೆಳಿಗ್ಗೆ ಮತ್ತು ಸಂಜೆ ಅವಳ ಮನೆಯಲ್ಲಿಯೇ ತರಗತಿಗಳು ನಡೆಯುತ್ತಿದ್ದವು. ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಕುಟ್ಟಿಯಮ್ಮ 4ನೇ ತರಗತಿ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದರು.
ಉತ್ತಮವಾಗಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿದ ಇವರಿಗೆ ನೀವು ಎಷ್ಟು ಅಂಕಗಳನ್ನು ಗಳಿಸಿರಬಹುದು ಎಂದು ಕೇಳಿದಾಗ, ಹಲ್ಲಿಲ್ಲದ ಮುಗುಳ್ನಗೆಯನ್ನು ಕೊಟ್ಟು ಕುಟ್ಟಿಯಮ್ಮ ವ್ಯಂಗ್ಯವಾಡಿದರು. “ನನಗೆ ಗೊತ್ತಿದ್ದನ್ನೆಲ್ಲ ಬರೆದಿದ್ದೇನೆ, ಈಗ ನೀನು ಅಂಕ ಹಾಕು.” ಆಕೆಯ ದಿಢೀರ್ ಉತ್ತರವು ಕುನ್ನುಂಪುರಂ ಅಂಗನವಾಡಿಯಲ್ಲಿ ನಗುವನ್ನು ಉಕ್ಕಿಸಿತು.
ಕುಟ್ಟಿಯಮ್ಮ 16ನೇ ವಯಸ್ಸಿನಲ್ಲಿ ವಿವಾಹವಾದರು. ಆಯುರ್ವೇದದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಪತಿ ಟಿ ಕೆ ಕೊಂತಿಯವರು 2002ರಲ್ಲಿ ನಿಧನರಾದರು. ಅವರ ಮಕ್ಕಳು ಜಾನಕಿ, ಗೋಪಾಲನ್, ರಾಜಪ್ಪನ್, (ದಿವಂಗತ) ಗೋಪಿ ಮತ್ತು ರವೀಂದ್ರನ್. ಪ್ರಸ್ತುತವಾಗಿ ಕುಟ್ಟಿಯಮ್ಮ ತನ್ನ ಮಗ ಗೋಪಾಲ್ನೊಂದಿಗೆ ವಾಸವಾಗಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
0 Comments